1965, 1971ರ ಯುದ್ಧದಲ್ಲಿ ಭಾಗಿ, ಢಾಕಾ ಗವನ್ನರ್ ಹೌಸ್ ಮೇಲೆ ದಾಳಿ, ಪಾಕಿಸ್ತಾನದ ಫೈಟರ್ ಜೆಟ್ ಧ್ವಂಸ, ಭಾರತದ ಮಿಗ್ 21 ಬೈಸನ್ ಆಗಲಿದೆ ನಿವೃತ್ತಿ.

ಭಾರತದ ವಾಯು ಸೇನೆ ಈ ವರ್ಷ ಸೆಪ್ಟೆಂಬರ್ ನಲ್ಲಿ ಮಿಗ್ 21 ಫೈಟರ್ ಜಟ್ಟನ್ನು ನಿವೃತ್ತಿಗೊಳಿಸಲಿದೆ,  ಆದ್ದರಿಂದ ಸದ್ಯಕ್ಕೆ ಕೇವಲ 29 ಯುದ್ಧವಿಮಾನಗಳ  ಸ್ಕ್ವಾಡ್ರನ್ ಭಾರತದ ಬಳಿ ಉಳಿಯಲಿದೆ ,1960ರ ದಶಕದ ಅತ್ಯಾಧುನಿಕ  ಫೈಟರ್ ಜೆಟ್ ಆದ  ಮಿಗ್ 21 ಅನ್ನು 1964 ರಲ್ಲಿ ಭಾರತದ ವಾಯು ಸೇನೆಗೆ ಸೇರ್ಪಡಿಸಲಾಯಿತು, ಮುಂದೆ ಇದು 1965 ಹಾಗೂ 1971ರ ಯುದ್ಧದಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿಭಾಯಿಸಿತು. 

ಭಾರತದ ವಾಯು ಸೇನೆಯ  ಮಿಗ್ 21 ಫೈಟರ್ ಗಳು ಈ ವರ್ಷದ ಸೆಪ್ಟೆಂಬರ್ ನಲ್ಲಿ ನಿವೃತ್ತಿಯಾಗಲಿದೆ ಆದ್ದರಿಂದ ಭಾರತದ ವಾಯು ಸೇನೆಯ ಬಳಿ ಕೇವಲ 29  ಸ್ಕ್ವಾಡ್ರ ನ್ ಮಾತ್ರ ಉಳಿಯಲಿದೆ ಹೊಸ ಸ್ಕ್ವಾಡ್ರನ್ ನಿರ್ಮಿಸಲು ಭಾರತೀಯ ವಾಯು ಸೇನೆಗೆ  ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ನ ನಿರಿಕ್ಷೆಯಲ್ಲಿದೆ. 

ಅತಿ ವಿಶಿಷ್ಟ ಯುದ್ಧ ವಿಮಾನ

1960ರ ದಶಕದ ಅತ್ಯಾಧುನಿಕ ಯುದ್ಧ ವಿಮಾನವಾದ ಮಿಗ್  21 ಅನ್ನು ಆಧುನಿಕರಣ ಗೊಳಿಸಿ ಇದನ್ನು ಭಾರತದ ಏರ್ ಫೋರ್ಸ್ ನಲ್ಲಿ  ಮಿಗ್ 21 ಬೈಸನ್ ಎಂದು  ಕರೆಯಲಾಯಿತು,  1961 ರಲ್ಲಿ ಪಾಕಿಸ್ತಾನವನ್ನು ಗಮನದಲ್ಲಿಟ್ಟುಕೊಂಡು ಗಮನದಲ್ಲಿ  ಇರಿಸಿಕೊಂಡು ಇವುಗಳ ಖರೀದಿಯನ್ನು ಆರಂಭಿಸಲಾಯಿತು ಮುಂದೆ 1964ರ ನಂತರ ಭಾರತದ ವಾಯು ಸೇನೆಗೆ ಮಿಗ್ 21 ಲಭಿಸಲು ಆರಂಭಿಸಿತು.

1965 ಹಾಗೂ 1971ರ ಯುದ್ಧದಲ್ಲಿ ಮಹತ್ವದ ಪಾತ್ರ. 

 ಮಿಗ್ 21ನ ಬಳಕೆ 1965ರ  1971ರ ಯುದ್ಧದಲ್ಲಿ ಮಾಡಲಾಯಿತು. ಬಾಂಗ್ಲಾ ವಿಮೋಚನ ಯುದ್ಧದಲ್ಲಿ,  ಡಾಕಾ ಗವರ್ನರ್ ಹೌಸ್ ಮೇಲೆ ಡಿಸೆಂಬರ್ 14, 1971 ರಂದು  ಮಿಗ್ 21ಯುದ್ಧ ವಿಮಾನಗಳು ಮಾಡಿದ ದಾಳಿ ಯುದ್ಧದಲ್ಲಿ ಮಹತ್ವದ ತಿರುವಿಗೆ ಕಾರಣವಾಯಿತು, ಮುಂದೆ ಇದು ಕಾರ್ಗಿಲ್ ಯುದ್ಧದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು,  ಭಾರತೀಯ ವಾಯು ಸೇನೆಯ ಬಾಲಕೋಟ್ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನದ ಏರ್ ಫೋರ್ಸ್ ತನ್ನ ಎಫ್ 16  ಯುದ್ಧ ವಿಮಾನದಿಂದ ಭಾರತೀಯ ವಾಯು ಕ್ಷೇತ್ರವನ್ನು ಉಲ್ಲಂಘಿಸಿದಾಗ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಇದೇ  ಮಿಗ್ 21 ಮೂಲಕ ಪಾಕಿಸ್ತಾನದ ಎಫ್ 16 ಅನ್ನು ಹೊಡೆದುರುಳಿಸಿದರು. 

 ಭಾರತದ ಏರ್ ಫೋರ್ಸ್ ಗೆ  ಚೀನಾ ಪಾಕಿಸ್ತಾನದೊಡನೆ ಒಂದೇ ಸಮಯಕ್ಕೆ 2 ಫ್ರಂಟ್ ಯುದ್ಧದ ಅಪಾಯವನ್ನು ಗಮನದಲ್ಲಿರಿಸಿಕೊಂಡು 42 ಫೈಟರ್ಸ್ ಸ್ಕ್ವಾಡ್ರನ್ ಗಳ ಮಂಜೂರಿ ದೊರಕಿದೆ ಸದ್ಯಕ್ಕೆ ಭಾರತದ ಬಳಿ ಸಕ್ರಿಯವಾಗಿ 31 ಸ್ಕ್ವಾಡ್ರನ್ ಗಳಿವೆ.

 ಆದರೆ  ಮಿಗ್ 21 ನಿವೃತ್ತಿಯ ಬಳಿಕ ಭಾರತದ ಬಳಿ ಕೇವಲ 29  ಸ್ಕ್ವಾಡ್ರನ್ಗಳು ಉಳಿಯಲಿದೆ ಈ ಜಾಗವನ್ನು ಸ್ವದೇಶಿ ನಿರ್ಮಿತ ತೇಜಸ್ ತುಂಬಲಿದೆ ಸದ್ಯಕ್ಕೆ ಏರ್ ಫೋರ್ಸ್ ಬಳಿ ಜಾಗ್ವಾರ್  ಫೈಟರ್ ಜೆಟ್ ಗಳ  6 ಮಿರಾಜ್ ಯುದ್ಧವಿಮಾನಗಳ 3 ಮಿಕ್ ಮಿಗ್ 21 ತೇಜಸ್ ನ ಎರಡು ಹಾಗೂ ರಫೈನ ಎರಡು ಸ್ಕ್ವೇರ್ಗಳು ಇವೆ ಉಳಿದ 15ಸ್ಕ್ವಾಡ್ರನ್ ಗಳು  ಸುಖೋಯಿ ಯುದ್ಧ ವಿಮಾನ ಹಾಗೂ  ಮಿಗ್ 29 ಗಳಿಂದ ಕೂಡಿವೆ.

Leave a Reply

Your email address will not be published. Required fields are marked *