ತರಕಾರಿ ಕತ್ತರಿಸುವುದರಿಂದ ಹಿಡಿದು ಸಂಪೂರ್ಣ ಅಡುಗೆ, ಎಲ್ಲಾ ರೀತಿಯ ಖಾದ್ಯಗಳನ್ನು ಎ ಐ ಅಸಿಸ್ಟೆಂಟ್ ಮಾಡಬಲ್ಲದು! Amazon ನಲ್ಲಿ ಸಿಗುತ್ತಿದೆ ವಿಶೇಷ ರೂಪದ ಈ ಏ ಐ ಅಸಿಸ್ಟೆಂಟ್.

ಪ್ರಪಂಚದಲ್ಲಿ ಇತ್ತೀಚೆಗೆ ಅತಿ ವೇಗವಾಗಿ   ಬಳಕೆಯಾಗುತ್ತಿರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇಂದು ಭಾರತೀಯ ಖಾದ್ಯ ಮನೆಗೆ ಮನೆಗೂ ಕೂಡ ತಲುಪಿದೆ.  ಇಲ್ಲಿ ಎಐ ಸ್ಮಾರ್ಟ್ ಕುಕಿಂಗ್ ಅಸಿಸ್ಟೆಂಟ್ ಎಂಬ ಡಿವೈಸ್ ಕೇವಲ ಅಡುಗೆ ಮಾತ್ರವಲ್ಲದೆ ತರಕಾರಿ ಕತ್ತರಿಸುವುದು, ಹಿಟ್ಟಿನ ಮುದ್ದೆ ನಿರ್ಮಿಸುವುದು ಮುಂತಾದ  ಒಬ್ಬ ಉತ್ತಮ ಅಡುಗೆಗಾರನ ಕೆಲಸವನ್ನು  ಮಾಡುತ್ತದೆ.  

ಭಾರತದಲ್ಲಿ ಎಐ ಸ್ಮಾರ್ಟ್ ಕುಕಿಂಗ್ ಅಸಿಸ್ಟೆಂಟ್: ಈ ಎಐ ಆಗಮನದ ನಂತರ   ವಿದ್ಯಾರ್ಥಿಗಳಿಂದ ಹಿಡಿದು ಆಫೀಸ್ ನ  ಕರ್ಮಚಾರಿಗಳಿಗೆ ಇಂದು ಕೆಲಸ ಮಾಡಲು ಸುಲಭವಾಗುತ್ತಿದೆ ಹೆಚ್ಚಾಗಿ ಭಾರತೀಯ ಮನೆಗಳಲ್ಲಿ ಮಹಿಳೆಯರೇ ಅಡುಗೆಯನ್ನು ಮಾಡುತ್ತಾರೆ, ಆದರೆ ಇಂದು ಅವರ ಸಹಾಯಕ್ಕೆ ಸ್ಮಾರ್ಟ್ ಕುಕಿಂಗ್ ಅಸಿಸ್ಟೆಂಟ್ ಕೂಡ ಬಂದಿದೆ ಇದು ಭಾರತದ ಮೊದಲ ಸ್ಮಾರ್ಟ್ ಕುಕಿಂಗ್ ಅಸಿಸ್ಟೆಂಟ್ ಅಂತ ಹೇಳಲಾಗುತ್ತಿದೆ, ಇದು ಒಂದು ರೋಬೋಟ್ ತರದ ಪಾತ್ರೆಯಾಗಿದೆ ಆದರೆ ಇದು ಅನೇಕ ಕೆಲಸಗಳನ್ನು ಸ್ವಯಂ  ತಾನಾಗಿಯೇ ಮಾಡಿ ತೋರಿಸುತ್ತದೆ. ಬನ್ನಿ ಈ ಯಂತ್ರದ ಗುಣ ಲಕ್ಷಣಗಳೇನು  ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಬಗ್ಗೆ ನಾವು ಇಂದು ತಿಳಿಯೋಣ. 

ಈ  ಎ ಐ ಕುಕ್ಕಿಂಗ್ ಅಸಿಸ್ಟೆಂಟ್ ಯಾವೆಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತದೆ?

 ಸೆಮಾಪೂರ್ ವರದಿಯ ಪ್ರಕಾರ  ಅಪ್ಪ್ಲೈನ್ಸ್ ಡಾಟ್ ಕಾಮ್ ಎಂಬ ಸಂಸ್ಥೆ ಭಾರತದ ಮೊದಲ ಸ್ಮಾರ್ಟ್ ಕುಕಿಂಗ್ ಅಸಿಸ್ಟೆಂಟ್ ಎಂಬ ಯಂತ್ರವನ್ನು ನಿರ್ಮಿಸಿದೆ. ಇದು ಇತ್ತೀಚಿಗೆ ಬಹಳ ವೇಗವಾಗಿ ಪ್ರಸಿದ್ಧವಾಗುತ್ತಿದೆ, ಇದು ಚಪಾತಿಯ ಹಿಟ್ಟು ತಯಾರಿಕೆ ತರಕಾರಿ ಕತ್ತರಿಸುವುದು ಹಾಗೂ ಅದರ ಮಿಶ್ರಣಗಳನ್ನು ತಯಾರು ಮಾಡುವುದು ಅಡುಗೆಯ ಮಿಶ್ರಣಗಳನ್ನು ತಯಾರು ಮಾಡುವುದು ಅಡುಗೆ ಬೇಯಿಸುವುದು ಮುಂತಾದ ಕೆಲಸ ಕಾರ್ಯಗಳನ್ನು ಮಾಡುತ್ತದೆ. ಇದು ಮನೆಯಿಂದ ದೂರದ ಊರುಗಳಲ್ಲಿ ಕೆಲಸ ಮಾಡುವವರಿಗೆ ಹಾಗೂ ದಿನಾಲು ಹಾಗೂ ಯಾರಿಗೆ ಅಡುಗೆ ಮಾಡಲು ಸಮಯವಿಲ್ಲವೂ ಅವರಿಗೆ ಬಹಳಷ್ಟು  ಉಪಯುಕ್ತ ಡಿವೈಸ್ ಆಗಿದೆ.

ಇದರಲ್ಲಿ 500ಕ್ಕಿಂತಲೂ ಅಧಿಕ ರೆಸಿಪಿಗಳನ್ನು ನಿರ್ಮಿಸುವ ಸೇವೆ ಇದೆ. 

ಈ ಯಂತ್ರದ ಅತಿ ವಿಶಿಷ್ಟ ಗುಣಲಕ್ಷಣ ಏನೆಂದರೆ ಇದು 500ಕ್ಕಿಂತಲೂ ಹೆಚ್ಚಿನ ಆಹಾರದ ರೆಸಿಪಿಗಳನ್ನು ನಿರ್ಮಿಸಬಲ್ಲದು,  ಹಾಗಾಗಿ ಇದರ ಬಳಕೆದಾರರಿಗೆ ದಿನನಿತ್ಯದ ಕೆಲಸದ ನಡುವೆ ರಿಸೆಪಿಗಳನ್ನು ತಯಾರು ಮಾಡುವ ಅವಶ್ಯಕತೆ ಇರುವುದಿಲ್ಲ, ಇದರಲ್ಲಿ ಒಂದು ಟ್ಯಾಬ್ ಕೂಡ ಅಳವಡಿಕೆಯಾಗಿದೆ ಇದರಲ್ಲಿ ಬೇಕಾದ ರೆಸಿಪಿಗಳ ಸೇವೆಯನ್ನು ಸೂಚಿಸಬಹುದು.  ಇದರಲ್ಲಿ ಸಂಗ್ರಹವಾಗಿರುವ ಡೇಟಾದ ಪ್ರಕಾರ ತಾನಾಗಿ ಅಡುಗೆಯನ್ನು ಮಾಡುತ್ತದೆ ಹಾಗೂ ನಮಗೇನಾದರೂ ಅದರಲ್ಲಿ ಬದಲಾವಣೆ ನೀಡುವ  ಬೇಕಿದ್ದರೆ ನೀಡುವ ಮಾಹಿತಿಯ ಪ್ರಕಾರ ಅದನ್ನು ಕೂಡ ಈ ಯಂತ್ರ ಮಾಡಿ ತೋರಿಸುತ್ತದೆ. 

ಈ ಡಿವೈಸ್ ನ ಬಳಕೆ ಹೇಗೆ ಮಾಡಲಾಗುತ್ತದೆ? 

ಈ ಡಿವೈಸ್ ನಲ್ಲಿ ನೀವು ಕೇವಲ ರೆಸಿಪಿಯನ್ನು ಆಯ್ಕೆ ಮಾಡಬೇಕಾಗುತ್ತದೆ ಅದರ ನಂತರ ನೀವು ಯಂತ್ರ ಹೇಳಿದ ಪ್ರಕಾರ ಅದರ ಪಾತ್ರೆಗೆ ನೀವು ಸಾಮಗ್ರಿಗಳನ್ನು ಹಾಕಬೇಕಾಗುತ್ತದೆ ನಂತರ ಎಲ್ಲಾ ಕೆಲಸವನ್ನು ಅಂದರೆ  ಎಷ್ಟು ಪ್ರಮಾಣದ ಆಹಾರ ಬೇಕು ಉಪ್ಪು ಹುಳಿ ಕಾರದ ಪ್ರಮಾಣ  ಎಷ್ಟು ಎಂಬುದನ್ನು ತಿಳಿಸಬೇಕಾಗುತ್ತದೆ.  ಈ ಎಲ್ಲಾ ಮಾಹಿತಿಯನ್ನು ನೀಡಿದ ನಂತರ ಎಐ ಅಚ್ಚುಕಟ್ಟಾಗಿ ನಿಮಗೆ ಬೇಕಾದ ಆಹಾರವನ್ನು ತಯಾರಿಸುತ್ತದೆ.  ಈ ಯಂತ್ರದಲ್ಲಿ ಭಾಷೆಯ ಬಳಕೆ  ಕೇವಲ ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ ಹಾಗೂ ಭಾರತದ ಎಲ್ಲಾ ರಾಜ್ಯಗಳ ಭಾಷೆಯಲ್ಲೂ ಯಂತ್ರಕ್ಕೆ ನಿರ್ದೇಶನ ನೀಡಬಹುದು.

ಸ್ಮಾರ್ಟ್ ಕುಕಿಂಗ್ ಅಸಿಸ್ಟೆಂಟ್ ನ ಬೆಲೆ ಎಷ್ಟು? 

ಭಾರತದ ಮೊದಲ  ಎ ಐ ಸ್ಮಾರ್ಟ್ ಕುಕಿಂಗ್ ಅಸಿಸ್ಟೆಂಟ್ ನಿಮಗೆ ಅಮೆಜಾನ್ ಇಂಡಿಯಾದಲ್ಲಿ  ಲಭಿಸುತ್ತಿದೆ. ಇದರ ಬೆಲೆ 28000 ರೂಪಾಯಿ ಇದನ್ನು ನಿರ್ಮಿಸುವ ಕಂಪನಿಯನ್ನು ಇಬ್ಬರು ಭಾರತದ ಐಐಟಿ ವಿದ್ಯಾರ್ಥಿಗಳಾದ ಮೆಹೆಕ್ ಮೋದಿ ಹಾಗೂ ಮಹೇಶ್ ಶರ್ಮ ರವರು ನಿರ್ಮಿಸಿದ್ದಾರೆ. ಈ ಪ್ರಾಡಕ್ಟ್ 2023ರಲ್ಲಿ ಲಾಂಚ್ ಆಗಿದೆ, ಆದರೆ 20204ರಲ್ಲಿ ಇದರೆ ಇದರ ಬಳಕೆ ಹೆಚ್ಚು ಪ್ರಸಿದ್ಧವಾಗಿದೆ.

Leave a Reply

Your email address will not be published. Required fields are marked *