12 ದೇಶಗಳಲ್ಲಿ ಅಪಾಯದ ಸಂಕೇತ…. ಆ ಸಮುದ್ರದ ಆ ಮಹಾಸಾಗರದ ಸುತ್ತಲೂ ಸುನಾಮಿ ಹಾಗೂ ಭೂಕಂಪದ ಜಾಲ! 

ಪ್ರಶಾಂತ ಮಹಾಸಾಗರ ಅಂದರೆ ಅಂದರೆ ಪೆಸಿಪಿಕ್ ಮಹಾಸಾಗರದ ಭಾಗವಾದ ಒಕೋತ್ಸಕ  ಸಾಗರವು ಒಂದು ಜೈವಿಕ ಸಮುದ್ರದ ಜೊತೆಗೆ ಭೂಕಂಪ ಹಾಗೂ ಸುನಾಮಿಗಳಿಗೆ ಸುನಾಮಿಗಳ ಕೇಂದ್ರವಾಗಿದೆ. 30 ಜುಲೈ  2025ರಂದು ರಷ್ಯಾದ ಕಮಚಟಕದಲ್ಲಿ ಸಂಭವಿಸಿದ ಭೂಕಂಪ  ಇದರ ಶಕ್ತಿಯ ಒಂದು ಉದಾಹರಣೆಯಾಗಿದೆ, ಇದರಿಂದಾಗಿ 12 ದೇಶಗಳಾದ  ರಷ್ಯಾ ,ಜಪಾನ್, ಹವಾಯಿ, ಕ್ಯಾಲಿಫೋರ್ನಿಯ, ಸುಲೇಮಾನ್ ದ್ವೀಪ, ಅಲ್ಲಾಸ್ಕ,  ಚಿಲಿ, ಪಿನ್ಸ್ ಲ್ಯಾಂಡ್ ಗಳಲ್ಲಿ ಫಿಲಿಪೈನ್ಸ್ ಸ್ ನ್ಯೂಜಿಲ್ಯಾಂಡ್ ನ್ಯೂಜಿಲ್ಯಾಂಡ್ ಗಳಲ್ಲಿ ಸುನಾಮಿಯ ಆತಂಕ ಶುರುವಾಗಿದೆ.

ರಷ್ಯಾದ ಕಮಚಟಕ ಪರ್ಯಾಯ ದ್ವೀಪದಲ್ಲಿ 8.8 ತೀವ್ರತೆಯ ಭೂಕಂಪ ಉಂಟಾಗಿದೆ ಇದರಿಂದಾಗಿ ಪ್ರಶಾಂತ ಮಹಾಸಾಗರದಲ್ಲಿ ಸಂಚಾಲನ ಸೃಷ್ಟಿಯಾಗಿದೆ. ಇದರ ಈ ಭೂಕಂಪದ ಶಕ್ತಿ  ಎಷ್ಟಿತ್ತೆಂದರೆ ಹಿರೋಷಿಮಾದಲ್ಲಿ  ಸ್ಪೋಟಗೊಂಡ ಪರಮಾಣು  ಬಾಂಬಿನ ಒಂಬತ್ತು ಸಾವಿರದಿಂದ 14 ಸಾವಿರ ಬಾಂಬಿನ ಪ್ರಮಾಣದಷ್ಟಿದೆ  ಎಂದು ಅಂದಾಜಿಸಲಾಗಿದೆ. ಹಾಗಾಗಿ ಇದು 12 ದೇಶಗಳಲ್ಲಿ ಸುನಾಮಿಯ ಭಯವನ್ನು ಸೃಷ್ಟಿಸಿದೆ.

ಈ  ಸಾಗರವನ್ನು ಪೆಸಿಫಿಕ್ ರಿಂಗ್ ಆಫ್ ಫೈಯರ್ ಅಂತ ಕರೆಯುತ್ತಾರೆ, ಇದು ಭೂಕಂಪ ಹಾಗೂ ಸುನಾಮಿಯ ಒಂದು ದೊಡ್ಡ ಜಾಲವಾಗಿದೆ. ಪ್ರಿಯ ಓದುಗರೇ ಬನ್ನಿ ಈ ರಿಂಗ್ ಆಫ್ ಫಯರ್ ಎಂಬುದು ಏನು? ಇದರಿಂದ ಯಾವ ಯಾವ  ದೇಶಗಳು ಪ್ರಭಾವಕ್ಕೊಳಗಾಗಿದೆ ಎನ್ನುವುದನ್ನು ತಿಳಿಯೋಣ? ಹಾಗೂ ಇದು ಇಷ್ಟೊಂದು ಅಪಾಯಕಾರಿ ಏಕೆ ಎಂಬುದನ್ನು ತಿಳಿಯೋಣ?

ಪ್ರಶಾಂತ ಮಹಾಸಾಗರ ಹಾಗೂ ಒಕೋತ್ಸಕ ಸಾಗರ:  ಒಂದು ಅಪಾಯಕಾರಿ ಸಂಗಮ

ಪ್ರಶಾಂತ ಮಹಾಸಾಗರವು ಪ್ರಪಂಚದ ಅತಿ ದೊಡ್ಡ ಹಾಗೂ ಅತಿ ಆಳದ ಮಹಾಸಾಗರವಾಗಿದೆ,ಮಿಲಿಯ 165.52 ಮಿಲಿಯನ್ ವರ್ಗ ಕಿಲೋಮೀಟರ್ ನಷ್ಟು ವಿಸ್ತಾರವಾಗಿದೆ. ಇದರ ಸರಾಸರಿ ಆಳ 4,280 ಮೀಟರ್ ಆಗಿದೆ, ಇದು ಪಶ್ಚಿಮದಲ್ಲಿ ಏಷ್ಯಾ ಹಾಗೂ ಆಸ್ಟ್ರೇಲಿಯಾ  ಪೂರ್ವದಲ್ಲಿ ದಕ್ಷಿಣ ಹಾಗೂ ಉತ್ತರ  ಅಮೇರಿಕಾದಿಂದ ಸುತ್ತುವರಿದಿದೆ. ಈ ಮಹಾಸಾಗರ ಅನೇಕ ಸಮುದ್ರಗಳನ್ನು ಉಪಸಾಗರ ಗಳನ್ನು ಹೊಂದಿದೆ, ಅದರಲ್ಲಿ  ಒಂದು  ಒಕೋತ್ಸಕ ಸಾಗರವಾಗಿದೆ.

ಒಕೋತ್ಸಕ ಸಾಗರವು ಪ್ರಶಾಂತ ಮಹಾಸಾಗರದ ಉತ್ತರ ಪಶ್ಚಿಮದಲ್ಲಿ ಸ್ಥಿತವಾಗಿದೆ, ಇದು ರಷ್ಯಾದ ಕಮಚಟಕ ಪರ್ಯಾಯ ದ್ವೀಪ, ಕುರಿಲ್ ದ್ವೀಪ ಹಾಗೂ  ಜಪಾನಿನ ಹುಕ್ಕಾಡು  ದ್ವೀಪ ಹಾಗೂ ಪೂರ್ವದಲ್ಲಿ ಸೈಬೇರಿಯನ್ ತಟದಿಂದ ಸುತ್ತುವರಿದಿದೆ. ಇದು 1.58 ಮಿಲಿಯನ್ ವರ್ಗ ಕಿಲೋಮೀಟರ್ ನಷ್ಟು ವಿಸ್ತಾರವಾಗಿದೆ, ಇದರ ಸರಾಸರಿ ಆಳ 859 ಮೀಟರ್ ಹಾಗೂ ಗರಿಷ್ಠ ಆಳ 3 372 ಮೀಟರ್ ಆಗಿದೆ.

 ಒಕೋತ್ಸಕ  ಸಾಗರವನ್ನು ಪ್ರಶಾಂತ ಮಹಾಸಾಗರದ “ಹೃದಯ” ಎಂದು ಕರೆಯುತ್ತಾರೆ, ಯಾಕೆಂದರೆ ಇದು ತಂಪು ನೀರು, ಹಾಗೂ ಆಕ್ಸಿಜನ್ ಪೋಷಕ ತತ್ವಗಳನ್ನು ಪ್ರಶಾಂತ ಮಹಾಸಾಗರಕ್ಕೆ ಪೂರೈಸುತ್ತದ,, ಇದರಿಂದ  ಫೆಸಿಫಿಕ್ ಸಾಗರದ ಜೀವಿಗಳಿಗೆ ಪೋಷಕ ತತ್ವಗಳು ದೊರಕುತ್ತದೆ. ಆದರೆ ಈ ಕ್ಷೇತ್ರ ಕೇವಲ ಜೈವಿಕ ಸಮುದ್ರವಾಗಿರದೆ  ಇದು ಅದರೊಂದಿಗೆ ಅಪಾಯಕಾರಿ ಭೂಕಂಪದ ಗತಿ ವಿಧಿಗಳಿಗೂ ಕುಖ್ಯಾತಿಯನ್ನು ಪಡೆದಿದೆ.

ಪೆಸಿಫಿಕ್ ರಿಂಗ್ ಆಫ್ ಫಯರ್ ಅಂದರೆ ಏನು?

ಪೆಸಿಪಿಕ್  ರಿಂಗ್ ಆಫ್ ಫಯರ್ ಪ್ರಶಾಂತ ಮಹಾಸಾಗರದ ಸುತ್ತಲೂ ಇರುವ ಒಂದು ಜಾಲವಾಗಿದೆ, ಇಲ್ಲಿ ಪೃಥ್ವಿಯ ಟೆಕ್ಟಾನಿಕ್ ಪ್ಲೆಟ್ಸ್ ಅಂದರೆ ಭೂಮಿಯ ಮೇಲಿನ ವಿಶಾಲ ಪದರಗಳು ಒಂದಕ್ಕೊಂದು ಘರ್ಷಣೆಗೆ ಒಳಗಾಗುತ್ತವೆ. ಈ ಜಾಲ ದಕ್ಷಿಣ ಅಮೇರಿಕಾದ ಚಿಲಿಯಿಂದ ಹಿಡಿದು  ಮಧ್ಯ ಅಮೆರಿಕ, ಮೆಕ್ಸಿಕೋ, ಅಮೆರಿಕದ ಪಶ್ಚಿಮ ತಟ, ಅಲ್ಲಾಸ್ಕ, ಜಪಾನ್,  ಫಿಲಿಪಿನ್ಸ್, ನ್ಯೂ ಗಿನಿ ಹಾಗೂ ನ್ಯೂಜಿಲ್ಯಾಂಡ್ ತನಕ ಸುತ್ತುವರಿದಿದೆ.

ಪ್ರಪಂಚದ 90% ಭೂಕಂಪ ಇದೇ ಕ್ಷೇತ್ರದಲ್ಲಿ ಸಂಭವಿಸುತ್ತದೆ. ಒಕ್ಕೂತ್ಸಕ ಸಾಗರವು ಈ ರಿಂಗ್ ನ ಒಂದು ಭಾಗವಾಗಿದೆ, ಇವು ಕಮಚಟಕ  ಹಾಗೂ ಕುರಿಲ್ ದ್ವೀಪದ ಹತ್ತಿರ ಭೂಕಂಪದ ರೂಪದಲ್ಲಿ ತುಂಬಾ ಸಕ್ರಿಯವಾಗಿವೆ. ಯಾವಾಗ ಈ ಟೆಕ್ಟಾನಿಕ್ ಪ್ಲೇಟಗಳು ಘರ್ಷಣೆಗೆ ಒಳಗಾಗುತ್ತವೆ ಆ ಸಮಯದಲ್ಲಿ ಸಮುದ್ರದ ಆಳದಲ್ಲಿ  ಅಲುಗಾಟ ಸೃಷ್ಟಿಯಾಗಿ ಸುನಾಮಿ ಉಂಟಾಗುತ್ತದೆ. 30 ಜುಲೈ 2018 ರಂದು ಕಮಚಟಕ ಭೂಕಂಪ ಇದರ ಒಂದು ಉದಾಹರಣೆಯಾಗಿದೆ, ಇದರಿಂದಾಗಿ ಪ್ರಶಾಂತ ಮಹಾಸಾಗರ ಹಾಗೂ  ಒಕೋತ್ಸಕ ಸಾಗರದಲ್ಲಿ ಸುನಾಮಿಯ ಆತಂಕ ಸೃಷ್ಟಿಯಾಗಿದೆ.

 

Leave a Reply

Your email address will not be published. Required fields are marked *