
6G ಸ್ಪೀಡ್: ಚೀನಾವು ಇತ್ತೀಚಿಗೆ 6Gನೆಟ್ವರ್ಕ್ ನ ಪ್ರಯೋಗವನ್ನು ನಡೆಸಿ ಯಶಸ್ಸನ್ನು ತನ್ನದಾಗಿಸಿಕೊಂಡಿದೆ ಚೀನಾದ ಮೊಬೈಲ್ 50GB ಡೇಟಾವನ್ನು ಕೇವಲ ಒಂದು 1.4 ಸೆಕೆಂಡ್ ನಲ್ಲಿ ಡೌನ್ಲೋಡ್ ಮಾಡಿ ತೋರಿಸಿದೆ ಇದು 5ಜಿ ನೆಟ್ವರ್ಕ್ ಗಿಂತ ನೆಟ್ವರ್ಕ್ ಗಿಂತ 14 ಪಟ್ಟು ವೇಗವಾಗಿದೆ.
6G ಪ್ರಯೋಗ : 5G ಮೊಬೈಲ್ ನೆಟ್ವರ್ಕ್ ನಂತರ ಪ್ರಪಂಚದ ಪ್ರಮುಖ ರಾಷ್ಟ್ರಗಳು 6Gನೆಟ್ವರ್ಕ್ ನ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ, ಇದರಲ್ಲಿ ಅಮೆರಿಕ ಭಾರತ ಚೀನಾ ಮುಂತಾದ ರಾಷ್ಟ್ರಗಳು ಸೇರಿವೆ ಹಾಗಾಗಿ ಚೀನಾ ಇತ್ತೀಚಿಗೆ 6G ನೆಟ್ವರ್ಕ್ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲನ್ನು ಸಾಧಿಸಿದೆ, ಚೀನಾದ ಈ ಯಶಸ್ಸನ್ನು ಚೀನಾದ ಒಂದು ಚೈನಾ ಮೊಬೈಲ್ ಕಂಪನಿಯು ಮಾಡಿ ತೋರಿಸಿದೆ, ವರದಿಗಾರರ ಪ್ರಕಾರ ಚೀನಾ ಸಿಕ್ಸ್ ಜಿ ನೆಟ್ವರ್ಕ್ ಅಭಿವೃದ್ಧಿಗೆ ಭಾರಿ ಹಣವನ್ನು ಖರ್ಚು ಮಾಡುತ್ತಿದೆ, ಇಲ್ಲಿ ಚೀನಾ ಸಿಕ್ಸ್ ಜಿ ನೆಟ್ವರ್ಕ್ ಸರ್ವಿಸ್ ಪ್ರಾರಂಭಗೊಳಿಸುವ ಮೊದಲ ರಾಷ್ಟ್ರವಾಗಿ ಗುರುತಿಸಲು ಬಯಸುತ್ತಿದೆ.
ಎರಡು ಗಂಟೆಯ ಫಿಲಂ ಕೇವಲ ಎರಡು ಸೆಕೆಂಡ್ ನಲ್ಲಿ ಡೌನ್ಲೋಡ್
ಆಂಡ್ರಾಯ್ಡ್ ಹೆಡ್ಲೈನ್ಸ್ನ ವರದಿಯ ಪ್ರಕಾರ ಚೈನಾ ಮೊಬೈಲ್ ಚೀನಾದ ಪ್ರಮುಖ ಟೆಲಿಕಾಂ ಕಂಪನಿ ದೇಶದಲ್ಲಿ ಸಿಕ್ಸ್ ಜಿ ಮೊಬೈಲ್ ನೆಟ್ವರ್ಕನ್ನು ಒಂದು ಸೀಮಿತ ಕ್ಷೇತ್ರದಲ್ಲಿ ಪ್ರಯೋಗ ನಡೆಸಿದೆ, ಇಲ್ಲಿ ಸರಳ ಭಾಷೆಯಲ್ಲಿ ಹೇಳುವುದಾದರೆ ಎರಡು ಗಂಟೆಯ ಒಂದು ಸಿನಿಮಾವನ್ನು ಕೇವಲ ಎರಡು ಸೆಕೆಂಡ್ ನಲ್ಲಿ ಡೌನ್ಲೋಡ್ ಮಾಡಿ ತೋರಿಸಿದೆ, ವರದಿಗಾರರ ಪ್ರಕಾರ ಚೈನಾ ಮೊಬೈಲ್ ಯಾವಾಗ 6G ನೆಟ್ವರ್ಕ್ ಅನ್ನು ಪ್ರಯೋಗ ನಡೆಸಿತು ಅಲ್ಲಿ ಗರಿಷ್ಠ ವೇಗ 280 ಜಿಬಿಪಿಎಸ್ ತನಕ ತಲುಪಿತು ಇದು ಸದ್ಯದಲ್ಲಿರುವ 5G ನೆಟ್ವರ್ಕ್ ಗಿಂತ 14ಪಟ್ಟು ಹೆಚ್ಚು ವೇಗವಾಗಿದೆ, ಕೆಲವು ಹೇಳಿಕೆಗಳ ಪ್ರಕಾರ ಒಂದು ವೇಳೆ 6G ನೆಟ್ವರ್ಕ್ ಇಷ್ಟೊಂದು ವೇಗವಾಗಿದ್ದರೆ ಅದರ ಮುಂದೆ ಫೈಬರ್ ಬ್ರಾಂಡ್ ಇಂಟರ್ನೆಟ್ ಕನೆಕ್ಷನ್ ನಿಧಾನವಾಗಿದೆ ಎಂದು ಜನರಿಗೆ ಅನಿಸತೊಡಗುತ್ತದೆ.
ಸಿಕ್ಸ್ ಜಿ ಮೊಬೈಲ್ ನೆಟ್ವರ್ಕ್ ಸರ್ವಿಸ್ ಯಾವಾಗ ಲಾಂಚ್ ಆಗಲಿದೆ
6G ಮೊಬೈಲ್ ನೆಟ್ವರ್ಕನ್ನು 2030ರ ಇಸವಿಯ ಮೊದಲು ಲಾಂಚ್ ಮಾಡಬಹುದು ಯಾಕೆಂದರೆ ಎಲ್ಲಾ ಪ್ರಮುಖ ರಾಷ್ಟ್ರಗಳು ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿವೆ ಹಾಗಾಗಿ ಇದರಲ್ಲಿ ಯಾರು ಮೊದಲು ಆರು ಜಿ ಮೊಬೈಲ್ ನೆಟ್ವರ್ಕ್ ಸರ್ವಿಸ್ ಅನ್ನು ಲಾಂಚ್ ಮಾಡುವ ಮಾಡುವವರು ಎಂದು ಹೇಳುವುದು ಕಠಿಣವಾಗಿದೆ, ಚೀನಾದ ಹೊರತಾಗಿ ಅಮೆರಿಕ ಹಾಗೂ ಜಪಾನ್ ಕೂಡ ಈ ಸ್ಪರ್ಧೆಯಲ್ಲಿ ವೇಗವಾಗಿ ಸಾಗುತ್ತಿವೆ ಭಾರತದಲ್ಲೂ ಸ್ವದೇಶಿ 6ಜಿ ನೆಟ್ವರ್ಕ್ ಅಭಿವೃದ್ಧಿಯಲ್ಲಿ ಕೆಲಸ ಸಾಗುತ್ತಿದೆ ಸದ್ಯಕ್ಕೆ ಭಾರತದಲ್ಲಿ ಜಿಯೋ ಹಾಗೂ ಏರ್ಟೆಲ್ ನಿಂದ 5ಜಿ ನೆಟ್ವರ್ಕ್ ದೇಶದಾದ್ಯಂತ ರೋಲ್ ಔಟ್ ಆಗಿದೆ ಆದರೆ ಸರ್ಕಾರಿ ಕಂಪನಿಯಾದ ಬಿಎಸ್ಎನ್ಎಲ್ ಇನ್ನೂ ಕೂಡ 5G ಸೇವೆಯನ್ನು ಆರಂಭ ಮಾಡಲಿಲ್ಲ ಹಾಗಾಗಿ 6ಜಿ ನೆಟ್ವರ್ಕ್ ನಲ್ಲಿ ಭಾರತ ಎಷ್ಟು ಪ್ರಗತಿ ಸಾಧಿಸಿದೆ ಎಂಬುವುದು ಹೇಳುವುದು ಕಷ್ಟವಾಗಿದೆ.
ವರದಿಗಾರರ ಅನುಸಾರ 6 ಜಿ ನೆಟ್ವರ್ಕ್ ಅಭಿವೃದ್ಧಿಯಲ್ಲಿ ಚೀನಾ ಅತಿ ದೊಡ್ಡ ಹೂಡಿಕೆಯನ್ನು ಮಾಡುತ್ತಿದೆ ಚೀನಾ 6G ಟೆಕ್ನಾಲಜಿಯಲ್ಲಿ ಇಲ್ಲಿಯತನಕ 5.4 ಬಿಲಿಯನ್ ಡಾಲರ್ ಮೊತ್ತದ ಖರ್ಚನ್ನು ಮಾಡಿದೆ ,ಇದು ಭಾರತದ ನೆರೆಯ ರಾಷ್ಟ್ರ ತಾಂತ್ರಿಕತೆಯ ಮೇಲೆ ಎಷ್ಟೊಂದು ಹಣವನ್ನು ಹೂಡಿಕೆ ಮಾಡುತ್ತಿದೆ ಎನ್ನುವುದನ್ನು ಎನ್ನುವುದು ಗಮನಾರ್ಹ ವಿಷಯವಾಗಿದೆ.






Leave a Reply