ಪ್ರಪಂಚದಲ್ಲಿ ಬಣ್ಣ ಬದಲಾವಣೆಗೆ ಹೆಸರಾಗಿರುವ ಸರೋವರದ ಬಗ್ಗೆ ತಿಳಿಯೋಣ

ಪೂರ್ವ ಖಜಾಕಿಸ್ತಾನದಲ್ಲಿ ಇರುವ ಈ ಸರೋವರದ ಹೆಸರು ಅಲಕೂಲ್. ಇದು ಉಪ್ಪು ನೀರಿನ ಸರೋವರವಾಗಿದೆ. ಇದು ಕೇವಲ ಬಣ್ಣ ಬದಲಾವಣೆಗೆ ಮಾತ್ರವಲ್ಲದೆ, ತನ್ನ ರಚನಾತ್ಮಕ ಗುಣಗಳಿಗೂ ಹೆಸರಾಗಿದೆ. ಸ್ಥಳೀಯ ಜನರ ಪ್ರಕಾರ ಇದರ ಖನಿಜಯುಕ್ತ ಜಲ ತತ್ವ  ಹಲವು  ರೋಗಗಳಿಂದ ಮುಕ್ತಿಯನ್ನು ನೀಡುತ್ತದೆ. ಇಲ್ಲಿ ಅನೇಕ ವಲಸೆ ಪಕ್ಷಿಗಳು ಬಂದು ಆವಾಸವನ್ನು ಪಡೆಯುತ್ತದೆ. ಜಲವಾಯು ಪರಿವರ್ತನೆಯಿಂದ ಇದರ ನಾಜೂಕು ಪರಿಸ್ಥಿತಿಗೆ ಅಪಾಯ ಎದುರಾಗಿದೆ. ಈ ಸರೋವರ ಪ್ರಕೃತಿ ಸಂತುಲನದ ಒಂದು ಶಕ್ತಿಶಾಲಿ ಪ್ರತೀಕವಾಗಿ ತೋರಿಬರುತ್ತದೆ.  ಪ್ರಕೃತಿಗಳ ಆಶ್ಚರ್ಯಗಳಿಂದ ತುಂಬಿ ತುಳುಕಿರುವ ಈ ಸರೋವರ ತನ್ನ ಸುತ್ತಲೂ ವಿಶಾಲ ಮೈದಾನ ಹಾಗೂ ಆಕರ್ಷಿತ ಪರ್ವತ ಶ್ರೇಣಿಗಳಿಂದ  ಸುತ್ತುವರಿದಿದೆ. ಈ ಅಲಕೂಲ್ ಸರೋವರ ಪ್ರಪಂಚದ ಸುಂದರ  ಪ್ರಾಕೃತಿಕ ತಾಣವಾಗಿದ್ದರು ಯಾರು ಇದರ ಬಗ್ಗೆ ಹೆಚ್ಚಾಗಿ ಆಸಕ್ತಿ ವಹಿಸುವುದಿಲ್ಲ. ಇದೊಂದು ಆಶ್ಚರ್ಯಕರ ಉಪ್ಪು ನೀರಿನ ಸರೋವರವಾಗಿದೆ. ಇದರ ಉತ್ತರಕ್ಕೆ ಚೀನಾದ ಗಡಿ ಇದೆ…

ಇದು ಪ್ರವಾಸಿಗರ ಮೊದಲ ದೃಷ್ಟಿಗೆ  ಭೂಮಿಯ ಮೇಲೆ ಹಾರಾಡುವ ಒಂದು ನೀರಿನ ಸ್ತೋತ್ರದಂತೆ ಭಾಸವಾಗುತ್ತದೆ. ಆದರೆ ಇದರ ದಡದಲ್ಲಿ ಸ್ವಲ್ಪ ಸಮಯ ಕಳೆದರೆ ಇದರ ಅದ್ಭುತಗಳ ಪರಿಚಯವಾಗುತ್ತದೆ. ಆದ್ದರಿಂದ ಇದೊಂದು ಅಸಾಧಾರಣ ಸರೋವರವಾಗಿದೆ. ಇದರ ಅಂತರಾಳದಲ್ಲಿ ಹಲವಾರು ರಹಸ್ಯಗಳು ಅಡಗಿದೆ. ಇದು ಒಂದು ವಿಧದಲ್ಲಿ ನೀರು ಮತ್ತು ಉಪ್ಪಿನಿಂದ ಕೂಡಿದರೆ, ಇದರ ಗರ್ಭದಲ್ಲಿ ಅನೇಕ ಕಥೆಗಳು ಹಾಗೂ ಬಣ್ಣಗಳು , ವಿಜ್ಞಾನಕ್ಕೆ ಸವಾಲು ಹಾಕುವ ವಿಷಯಗಳು ಅಡಗಿಕೊಂಡಿವೆ…

 

ವಿಶ್ವದ ಅತಿ ಸುಂದರ ಸರೋವರ ಯಾವುದು?

 

ಅರ್ಥ.ಕಾಂನ ಪ್ರಕಾರ ಅಲಕೋಲ ಸರೋವರ ಪ್ರಪಂಚದ ಅತಿ ಸುಂದರ ಹಾಗೂ ರಮಣೀಯ ಸರೋವರವಾಗಿದೆ.

 

ಅಲಕೋಲ ಸರೋವರದ ವಿಶೇಷತೆ ಏನು?

 

ಇದು ಒಂದು ಸಾವಿರ ವರ್ಗ ಮೈಲಿನಷ್ಟು ವಿಸ್ತಾರವಾಗಿದೆ. ಇದು ಅಟ್ಲಾಂಟಿಕ್  ಮಹಾಸಾಗರಕ್ಕೆ ಹೋಲಿಸಿದರೆ ಅದರ 50ರಷ್ಟು ಶೇಕಡ ಉಪ್ಪಿನಾಂಶ ಲವಣಾಂಶವನ್ನು ಹೊಂದಿದೆ. ಇದರ ನೀರು ಅನೇಕ ಕಾಯಿಲೆಗಳಿಗೆ ಔಷಧವಾಗಿದೆ. ಇದು ಹೆಚ್ಚಾಗಿ ಸ್ನಾಯುಸೆಲೆತೆಗಳ ರೋಗವನ್ನು ನಿವಾರಿಸುತ್ತದೆ ಹಾಗೂ ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದು ಡೊಮೇಶಿಯನ್ ಫ್ಲೆಮಿಂಗೋ ಮುಂತಾದ ಪಕ್ಷಿಗಳ ಆವಾಸಸ್ಥಾನವಾಗಿದೆ. 2013ರಲ್ಲಿ ಯುನೆಸ್ಕೋ ಮಾನವ ಹಾಗೂ ಜೀವ ಮಂಡಲ ಕಾರ್ಯಕ್ರಮದ ಕ್ರಮದ ಭಾಗವಾಗಿದೆ. ಇದಕ್ಕೆ ರಾಮ್ ಸರ್ ಮಾನ್ಯತೆ ಕೂಡ ಪ್ರಾಪ್ತವಾಗಿದೆ. ಇದು ಸಾಮಾನ್ಯ ಸಿಹಿ ನೀರಿನ ಸರೋವರಕ್ಕಿಂತ ವಿಪರೀತವಾಗಿದೆ. ಉಪ್ಪು ನೀರಿನಿಂದ ಕೂಡಿದ್ದರು ಅನೇಕ ಸ್ಥಳೀಯ ಜನರ ಪ್ರಕಾರ ಈ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮದ ರೋಗ ಹಾಗೂ ಸ್ನಾಯು ಸೆಳೆತಗಳ ರೋಗದಿಂದ ಮುಕ್ತಿಯನ್ನು ಪಡೆಯಬಹುದು ಹಾಗೂ ಶ್ವಾಸಕೋಶದ ಸಂಬಂಧಿ ರೋಗ ಕೂಡ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಇದನ್ನು ಒಂದು ಪ್ರಾಕೃತಿಕ ಸ್ಪ ಅಂತ ಪ್ರವಾಸಿಗರು ವರ್ಣಿಸುತ್ತಾರೆ. ಇದರ ಮುಖ್ಯ ಆಕರ್ಷಣೆ ಏನೆಂದರೆ ಇದು ವರ್ಷಪೂರ್ತಿ ತನ್ನ ಬಣ್ಣವನ್ನು ಬದಲಾಯಿಸುತ್ತಿರುತ್ತದೆ. ವಸಂತ ಋತುವಿನ ಆರಂಭದಲ್ಲಿ  ಮಂಜು ಕರಗುವಾಗ ಇದರ ಬಣ್ಣ ಮಂಜು, ಬಿಳಿ ಹಾಗೂ ನೀಲಿ ಬಣ್ಣದಿಂದ ಕೂಡಿರುತ್ತದೆ. ಬೇಸಿಗೆಯ ಸಮಯದಲ್ಲಿ ಸೂರ್ಯನ ಕಿರಣದಿಂದ ಇದು ಕೆಂಪಾಗಿ ಕಾಣಸಿಗುತ್ತದೆ. ಕೆಲವೊಂದು ಸಾರಿ ಇದು ಹೊಳೆಯುವ ಬೆಳ್ಳಿಯಂತೆ ಕೂಡ ಕಾಣಸಿಗುತ್ತದೆ. ಇದರ  ವಿಸ್ಮಯವನ್ನು ತಿಳಿಯಲು ಈಗ ವಿಜ್ಞಾನಿಗಳು ಉಪಗ್ರಹದ ಚಿತ್ರಗಳ ಅಧ್ಯಯನ ನಡೆಸುತ್ತಿದ್ದಾರೆ……

Leave a Reply

Your email address will not be published. Required fields are marked *