ಇವತ್ತಿನ ಜಾಗತಿಕ ಉನ್ನತ ಶಿಕ್ಷಣ ವಿದ್ಯಾಭ್ಯಾಸದಲ್ಲಿ ಒಂದು ಬದಲಾವಣೆ ಕಂಡುಬರುತ್ತಿದೆ, ದೊಡ್ಡ ದೊಡ್ಡ ರಾಷ್ಟ್ರಗಳಾದ ಅಮೆರಿಕ, ಯುನೈಟೆಡ್ ಕಿಂಗ್ಡಂ, ಕೆನಡಾ ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಸಣ್ಣ ಸಣ್ಣ ರಾಷ್ಟ್ರಗಳ ಕಡೆ ತಮ್ಮ ಭವಿಷ್ಯದ ಉನ್ನತ ವಿದ್ಯಾಭ್ಯಾಸಕ್ಕೆ ಮುಖ ಮಾಡುತ್ತಿದ್ದಾರೆ, ಅಂತಹ ರಾಷ್ಟ್ರಗಳಲ್ಲಿ ಪ್ರಮುಖ ರಾಷ್ಟ್ರವಾಗಿ ಗುರುತಿಸಿಕೊಂಡಿರುವುದು ನ್ಯೂಜಿಲ್ಯಾಂಡ್ ಮತ್ತು ಐರ್ಲ್ಯಾಂಡ್. ಇವು ತಮ್ಮ ಉತ್ತಮ ಶಿಕ್ಷಣ ನೀತಿಗಳಿಂದಾಗಿ ಹಾಗೂ ವಿದ್ಯಾರ್ಥಿ ಸ್ನೇಹಿ ವಾತಾವರಣ ಗಳಿಂದಾಗಿ ಅನೇಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ವಿದ್ಯಾರ್ಥಿಗಳನ್ನು ತಮ್ಮ ದೇಶಗಳ ಕಡೆಗೆ ಆಕರ್ಷಿಸುತ್ತಿವೆ. ಒಂದು ಕಾಲದಲ್ಲಿ ಅಮೆರಿಕ ಸಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್ಡಂ, ಕೆನಡಾ ಮುಂತಾದ ರಾಷ್ಟ್ರಗಳು ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದವು, ಆದರೆ ಇಂದಿನ ಆ ವಿದ್ಯಾಮಾನ ಬದಲಾಗಿ ವಿದ್ಯಾರ್ಥಿಗಳು ಸಣ್ಣ ಸಣ್ಣ ರಾಷ್ಟ್ರಗಳಾದ ಐರ್ಲ್ಯಾಂಡ್ ನ್ಯೂಜಿಲ್ಯಾಂಡ್ ಕಡೆ ಮುಖ ಮಾಡುತ್ತಿದ್ದಾರೆ. ಬನ್ನಿ ಈ ನ್ಯೂಜಿಲ್ಯಾಂಡ್, ಐರ್ಲ್ಯಾಂಡ್ ರಾಷ್ಟ್ರಗಳ ಉನ್ನತ ಶಿಕ್ಷಣದ ಇದರ ಬಗ್ಗೆ ಒಂದು ಕಿರುನೋಟ.
ಇಂದಿನ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಯಾವ ರಾಷ್ಟ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರೆ ಅಲ್ಲಿ ಅವರಿಗೆ ಕಾನೂನುಗಳು ಸರಳವಾಗಿರಬೇಕು ಹಾಗೂ ಮುಂದಿನ ಭವಿಷ್ಯದಲ್ಲಿ ಅವರ ಅಭಿವೃದ್ಧಿ ಸ್ಪಷ್ಟವಾಗಿ ಗೋಚರಿಸಬೇಕು, ಹಾಗೂ ಅಲ್ಲಿನ ಶಿಕ್ಷಣದ ವಾತಾವರಣ ಕೂಡ ಉತ್ತಮವಾಗಿರಬೇಕು, ಇಂತಹ ಸಾಲುಗಳಲ್ಲಿ ಐರ್ಲ್ಯಾಂಡ್ ಹಾಗೂ ನ್ಯೂಜಿಲ್ಯಾಂಡ್ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಆಯ್ಕೆಗಳಲ್ಲಿ ಮೊದಲನೇ ಸ್ಥಾನಗಳಲ್ಲಿವೆ, ಈ ರಾಷ್ಟ್ರಗಳು ಲಕ್ಷಾಂತರ ವಿದ್ಯಾರ್ಥಿಗಳನ್ನು ತಮ್ಮ ದೇಶಕ್ಕೆ ಕರೆದುಕೊಳ್ಳುವುದಿಲ್ಲ ಆದರೆ ಇವರು ಕೆಲವೇ ವಿದೇಶಿ ವಿದ್ಯಾರ್ಥಿಗಳಿಗೆ ತಮ್ಮ ದೇಶದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ನೀಡುತ್ತಾರೆ, ಆದರೆ ಅವರು ಈ ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣ ಬೇರೆ ರಾಷ್ಟ್ರಗಳಿಗಿಂತ ಉತ್ತಮ ಗುಣಮಟ್ಟವನ್ನು ಹೊಂದಿರುತ್ತದೆ ಮತ್ತು ಅವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶವನ್ನು ಕೂಡ ಒದಗಿಸುತ್ತದೆ.
ಪ್ರಮಾಣದಲ್ಲಿ ಕನಿಷ್ಠವಾದರೂ ಭರವಸೆಯಲ್ಲಿ ಬಲಿಷ್ಠವಾಗಿದೆ.
ಅಮೆರಿಕ, ಯುನೈಟೆಡ್ ಕಿಂಗ್ಡಂ, ಕೆನಡಾ ರಾಷ್ಟ್ರಗಳು ದೊಡ್ಡ ಪ್ರಮಾಣದ ವಿದ್ಯಾರ್ಥಿಗಳನ್ನು ತಮ್ಮ ದೇಶಕ್ಕೆ ಕರೆಸಿಕೊಂಡರೆ ನ್ಯೂಜಿಲ್ಯಾಂಡ್ ಐರ್ಲೆಂಡ್ ರಾಷ್ಟ್ರಗಳು ವರ್ಷಕ್ಕೆ ಕೇವಲ ಅಂದರೆ ಐದು ಸಾವಿರದಿಂದ ಹತ್ತು ಸಾವಿರ ವಿದೇಶಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶವನ್ನು ನೀಡುತ್ತದೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಗಿಂತ ಪ್ರತಿ ವಿದ್ಯಾರ್ಥಿಯ ವ್ಯಕ್ತಿತ್ವ ಬೆಳವಣಿಗೆಗೆ ಅವರ ಕಲಿಕೆ, ಅಭಿವೃದ್ಧಿಗೆ ಪ್ರಮುಖ ಪ್ರಾವಧಾನ ನೀಡಲಾಗುತ್ತದೆ. ಇಲ್ಲಿ ಉತ್ತಮ ಶೈಕ್ಷಣಿಕ ಪ್ರೋತ್ಸಾಹ ಹಾಗೂ ವಿದ್ಯಾರ್ಥಿಗಳ ಭಾಗಿಧಾರಿಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಇಲ್ಲಿನ ಹೆಚ್ಚಿನ ವಿಶ್ವವಿದ್ಯಾಲಯಗಳು ಗಾತ್ರದಲ್ಲಿ ಸಣ್ಣದಾಗಿರುತ್ತದೆ ಹೆಚ್ಚೆಂದರೆ ಈ ವಿಶ್ವವಿದ್ಯಾಲಯಗಳಲ್ಲಿ 300 ಜನ ವಿದ್ಯಾರ್ಥಿಗಳು ಇರುತ್ತಾರೆ, ಹಾಗಾಗಿ ಪ್ರಾಧ್ಯಾಪಕರಿಗೆ ಎಲ್ಲಾ ವಿದ್ಯಾರ್ಥಿಗಳ ವೈಯುಕ್ತಿಕ ಹಾಗೂ ವ್ಯಕ್ತಿಗತ ಪರಿಚಯವಿರುತ್ತದೆ. ಇದು ವಿದ್ಯಾರ್ಥಿಗಳ ವೈಯುಕ್ತಿಕ ಬೆಳವಣಿಗೆಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಮಾನ್ಯವಾಗಿ ಭಾರತದಲ್ಲಿ ವಿದ್ಯಾರ್ಥಿಗಳು ದೊಡ್ಡ ಪ್ರಮಾಣದ ತರಗತಿಗಳಲ್ಲಿ ಅಧ್ಯಯನ ಮಾಡುತ್ತಾರೆ, ಇವರು ಈ ದೇಶಗಳಲ್ಲಿ ಕೆಲವೇ ಸಂಖ್ಯೆಯ ವಿದ್ಯಾರ್ಥಿಗಳ ಗುಂಪುಗಳಲ್ಲಿ ಅಧ್ಯಯನ ನಡೆಸುವಾಗ ಹೆಚ್ಚಿನ ಗಮನ ನೀಡಿ ಸ್ವಯಂ ಭವಿಷ್ಯದ ಅಧ್ಯಯನದ ಕಡೆ ಒತ್ತು ನೀಡುತ್ತಾರೆ.
ಅಧ್ಯಯನದ ಹೊರತಾಗಿನ ನಿಯಮಗಳು
ಈ ನ್ಯೂಜಿಲ್ಯಾಂಡ್ ಐರ್ಲ್ಯಾಂಡ್ ದೇಶಗಳು ಬಹಳ ಯೋಜನಾಬದ್ಧ ರೀತಿಯಲ್ಲಿ ತಮ್ಮನ್ನು ವಿದ್ಯಾರ್ಥಿ ಸ್ನೇಹಿತ ರಾಷ್ಟ್ರವನ್ನಾಗಿ ಗುರುತಿಸಿಕೊಂಡಿವೆ, ಅದಕ್ಕೆ ಪ್ರಮುಖ ಕಾರಣ ಈ ರಾಷ್ಟ್ರಗಳು ರೂಪಿಸಿಕೊಂಡಿರುವ ನೀತಿಗಳು.
ಇವುಗಳಲ್ಲಿ ಪ್ರಮುಖವಾದವು.
ಸುವ್ಯವಸ್ಥಿತ ವೇಗವಾದ ವೀಸಾ ಅನುಮೋದನೆ ಪ್ರಕ್ರಿಯೆ. ವಿದ್ಯಾಭ್ಯಾಸದ ನಂತರದ ಐಟಿ, ಆರೋಗ್ಯ, ಇಂಜಿನಿಯರಿಂಗ್, ಉದ್ಯಮ ಕ್ಷೇತ್ರಗಳಲ್ಲಿ ಖಾಯಂ ರೆಸಿಡೆನ್ಸಿ ಹಾಗೂ ಸಿಟಿಜನ್ ಶಿಪ್ ಪಡೆಯುವ ಅವಕಾಶ ಇದು ಬೇರೆ ರಾಷ್ಟ್ರಗಳ ಹೋಲಿಸಿದರೆ ಅಲ್ಲಿ ವಿದ್ಯಾಭ್ಯಾಸದ ವಿದ್ಯಾಭ್ಯಾಸಕ್ಕೆ ಕೇವಲ ಮೂರು ಮೂರರಿಂದ ನಾಲ್ಕು ವರ್ಷದ ವರ್ಷದ ವೀಸಾ ದೊರಕುತ್ತದೆ, ಅವರ ಮುಂದಿನ ಭವಿಷ್ಯದ ಬಗ್ಗೆ ಯಾವುದೇ ಭರವಸೆ ಇರುವುದಿಲ್ಲ ಒಂದು ವೇಳೆ ಅವಕಾಶ ಸಿಕ್ಕರು ತಾತ್ಕಾಲಿಕ ವೀಸಾ ದೊರಕುತ್ತದೆ. ಆದರೆ ಐರ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ಗಳು ಇದಕ್ಕೆ ವಿಭಿನ್ನವಾಗಿವೆ ಇವು ಹೊರಗಿನಿಂದ ಬಂದ ವಿದ್ಯಾರ್ಥಿಗಳನ್ನು ತಮ್ಮ ರಾಷ್ಟ್ರದ ಭವಿಷ್ಯದ ಏಳಿಗೆಯ ಪಾಲುದಾರರನ್ನಾಗಿಸುತ್ತದೆ, ಅಲ್ಲಿನ ಆರ್ಥಿಕತೆ ಈ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತದೆ.
ಸ್ಥಿರ ವೀಸಾದ ಮಹತ್ವ
ಕೆನಡಾದ ಜಟಿಲ ಕಾನೂನುಗಳು, ಪರಿವಾರದವರಿಗೆ ನಿರ್ಬಂಧ ಹಾಗೂ ಅಮೆರಿಕಾದಲ್ಲಿ ವೀಸಾ ನಿರಾಕರಿಕೆ ಮುಂತಾದ ಪ್ರಮುಖ ಕಾರಣಗಳಿಂದ ಭಾರತೀಯ ಪೋಷಕರು ತಮ್ಮ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಭವಿಷ್ಯದ ದೃಷ್ಟಿಯಿಂದ ಯಾವುದೇ ಅಪಾಯ ಇರದ ಹಾಗೂ ಸರಳತೆ ಹೊಂದಿರುವ ಹಾಗೂ ಯಾವುದೇ ನಾಟಕೀಯ ರಾಜಕೀಯ ಇರದ ರಾಷ್ಟ್ರಗಳಾದ ನ್ಯೂಜಿಲ್ಯಾಂಡ್ ಹಾಗೂ ಐರ್ಲ್ಯಾಂಡ್ ರಾಷ್ಟ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ.
ವಿದ್ಯಾಭ್ಯಾಸದ ಖರ್ಚು ವೆಚ್ಚಗಳು
ಅಮೇರಿಕಾ, ಕೆನಡಾ, ಇಂಗ್ಲೆಂಡ್ ಮುಂತಾದವುಗಳಲ್ಲಿ ದುಬಾರಿ ಶಿಕ್ಷಣ ಶುಲ್ಕ ಹಾಗೂ ಹಾಸ್ಟೆಲ್ ಬಾಡಿಗೆ ಮುಂತಾದವುಗಳು ಪೋಷಕರ ಬ್ಯಾಂಕ್ ಖಾತೆಯನ್ನು ಬರಿದಾಗಿಸುತ್ತದೆ, ಆದರೆ ನ್ಯೂಜಿಲ್ಯಾಂಡ್ ಹಾಗೂ ಐರ್ಲ್ಯಾಂಡ್ ಗಳು ಈ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ನ್ಯಾಯಯುತ ಶುಲ್ಕಕ್ಕೆ ಶಿಕ್ಷಣವನ್ನು ಒದಗಿಸುತ್ತದೆ, ಇಲ್ಲಿ ವಿದ್ಯಾರ್ಥಿಗಳಿಗೆ ಪಾರ್ಟ್ ಟೈಮ್ ಉದ್ಯೋಗ ಮಾಡಲು ಉತ್ತಮ ಕಾನೂನು ವ್ಯವಸ್ಥೆ ಕೂಡ ರಚಿಸಲಾಗಿದೆ ಇಲ್ಲಿ ವಿದ್ಯಾರ್ಥಿಗಳು ವಾರಕ್ಕೆ 20 ಗಂಟೆಗಳ ಕಾಲ ಕೆಲಸ ಮಾಡಬಹುದು, ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಖರ್ಚಿನ ಹಣಕಾಸು ವ್ಯವಸ್ಥೆಯನ್ನು ಕೂಡ ತಾವೇ ಮಾಡಿಕೊಳ್ಳಬಹುದು. ಹಾಗೂ ಈ ರಾಷ್ಟ್ರಗಳ ಪ್ರಮುಖ ವಿಶ್ವವಿದ್ಯಾಲಯಗಳು ಸಣ್ಣ ಸಣ್ಣ ನಗರಗಳಲ್ಲಿ ಇರುವುದರಿಂದ ಸಣ್ಣ ಸಣ್ಣ ನಗರಗಳಲ್ಲಿ ಮನೆ ಬಾಡಿಗೆ ಕೂಡ ಕಡಿಮೆ ಶುಲ್ಕಕ್ಕೆ ನೀಡಲಾಗುತ್ತದೆ, ಹಾಗೂ ಕೆಲವು ಕಡೆ ಉಚಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕೂಡ ವಿದ್ಯಾರ್ಥಿಗಳಿಗೆ ಒಂದು ನಿರಾಳತೆಯನ್ನು ಒದಗಿಸುತ್ತದೆ.
ಇಂದಿನ ವಿದ್ಯಾರ್ಥಿಗಳು ಕೇವಲ ಕ್ಲಾಸ್ ರೂಮ್ ತರಗತಿಯನ್ನು ಆಯ್ಕೆ ಮಾಡುವುದಿಲ್ಲ, ಇವರು ತಮ್ಮ ಹೂಡಿಕೆಗೆ ಉತ್ತಮ ರಿಟರ್ನ್ ಅನ್ನು ಕೂಡ ಬಯಸುತ್ತಾರೆ ಅಂದರೆ ಕರಿಯರ್, ಸಿಟಿಜನ್ ಶಿಪ್, ರೆಸಿಡೆನ್ಸಿ. ಹಾಗಾಗಿ ಇಲ್ಲಿ ಐರ್ಲೆಂಡ್ ಹಾಗೂ ನ್ಯೂಜಿಲ್ಯಾಂಡ್ ಗಳು ಒಂದು ಉತ್ತಮ ಆಯ್ಕೆ ಆಗಿರುತ್ತದೆ, ವಿದ್ಯಾಭ್ಯಾಸದ ನಂತರ ಅದರಲ್ಲೂ ಪ್ರಮುಖವಾಗಿ ನರ್ಸಿಂಗ್ ಡೇಟಾ ಸೈನ್ಸ್ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ನಡೆಸಿದ ವಿದ್ಯಾರ್ಥಿಗಳಿಗೆ ವರ್ಕ್ ವೀಸಾ, ಪರ್ಮನೆಂಟ್ ರೆಸಿಡೆನ್ಸಿ ಮುಂತಾದ ಸವಲತ್ತುಗಳು ದೊರಕುತ್ತದೆ. ಬೇರೆ ದೇಶಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಭಾರತೀಯ ವಿದ್ಯಾರ್ಥಿಗಳಿಗೆ ಉದ್ಯೋಗ ಹುಡುಕುವುದಕ್ಕೆ ಅನೇಕ ಸವಾಲುಗಳು ಹಾಗೂ ಸಮಸ್ಯೆಗಳನ್ನು ಸ್ಪರ್ಧೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನ್ಯೂಜಿಲ್ಯಾಂಡ್ ಹಾಗೂ ಐರ್ಲ್ಯಾಂಡ್ ರಾಷ್ಟ್ರಗಳು ತಮ್ಮಲ್ಲಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳನ್ನು ಹೊರಗಿನವರಂತೆ ಕಾಣದೆ ಸಮಾನ ಅವಕಾಶವನ್ನು ಒದಗಿಸುತ್ತದೆ, ಹಾಗೂ ಈ ವಿದ್ಯಾರ್ಥಿಗಳೇ ತಮ್ಮ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವಂತೆ ಪ್ರೋತ್ಸಾಹಿಸುತ್ತದೆ ಅವರಿಗೆ ಎಲ್ಲಾ ಸವಲತ್ತುಗಳನ್ನು ಒದಗಿಸುತ್ತದೆ.




Leave a Reply