ನಾವು ಯಾವತ್ತಿಗಾದರೂ ಪ್ರಪಂಚದ ಅತಿ ಶ್ರೀಮಂತ ರಾಷ್ಟ್ರವನ್ನು ಕಲ್ಪಿಸುವಾಗ, ಅಮೆರಿಕ ಚೈನಾದ ಹೆಸರು ಮೊದಲು ಬರುತ್ತದೆ, ಆದರೆ ವಾಸ್ತವವಾಗಿ ಶ್ರೀಮಂತ ರಾಷ್ಟ್ರಗಳ ಹೆಸರಿನ ಪಟ್ಟಿಯಲ್ಲಿ ಅಮೆರಿಕ ಚೀನಾದ ಹೆಸರು ತುಂಬಾ ಕೆಲಸ್ತರದಲ್ಲಿ ಬರುತ್ತದೆ, ಪ್ರಪಂಚದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಲು ಎಲ್ಲ ರಾಷ್ಟ್ರಗಳು ಬಯಸುತ್ತವೆ ಆದರೆ ಇದು ಬಹಳ ಕಠಿಣವಾದ ವಿಷಯವಾಗಿದೆ, ಅತಿ ದೊಡ್ಡ ಜಿಡಿಪಿ ಹೊಂದಿದ್ದರೆ ಆ ದೇಶ ಶ್ರೀಮಂತ ರಾಷ್ಟ್ರವೆಂಬ ಅರ್ಥವಲ್ಲ, ಇದಕ್ಕೆ ರಾಷ್ಟ್ರಗಳನ್ನು ಬೇರೆ ಬೇರೆ ಆಯಾಮಗಳಲ್ಲಿ ಅವಲೋಕಿಸಲಾಗುತ್ತದೆ, ಹಾಗಾಗಿ ವರ್ಲ್ಡ್ ಅಟ್ಲಾಸ್ ಸಂಸ್ಥೆಯಿಂದ ಜಾರಿಯಾದ 10 ಅತಿ ಶ್ರೀಮಂತರ ರಾಷ್ಟ್ರಗಳ ಪಟ್ಟಿಯನ್ನು ಗಮನಿಸಿ.
1 ಸಿಂಗಾಪುರ್. 
ಸಿಂಗಪುರ್ ಪ್ರಪಂಚದ ಅತಿ ಶ್ರೀಮಂತರ ರಾಷ್ಟ್ರವಾಗಿದೆ, ಈ ರಾಷ್ಟ್ರ ಉತ್ತಮ ವರಮಾನದ ಅರ್ಥ ವ್ಯವಸ್ಥೆಯನ್ನು ಹೊಂದಿದೆ, 2025ರಲ್ಲಿ ಈ ರಾಷ್ಟ್ರ ಪ್ರಪಂಚದಲ್ಲಿ ಅತಿ ಹೆಚ್ಚು ಜಿಡಿಪಿ ಪ್ರತಿ ವ್ಯಕ್ತಿ (ಪಿಪಿಪಿ)ಯನ್ನು ಹೊಂದಿದೆ, ಈ ರಾಷ್ಟ್ರ ತನ್ನ ವ್ಯಾಪಾರ ಸ್ನೇಹಿತ ವಾತಾವರಣ ಮೂಲಭೂತ ಸೌಕರ್ಯ ಶಿಕ್ಷಣ ಆರೋಗ್ಯ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಮಹತ್ವಪೂರ್ಣವಾಗಿ ಹೂಡಿಕೆ ಮಾಡಿದೆ. 1965ರಲ್ಲಿ ಸ್ವಾತಂತ್ರ್ಯ ಪಡೆದ ಈ ರಾಷ್ಟ್ರ ಅತಿ ವೇಗವಾಗಿ ಕಡಿಮೆ ಆದಾಯದಿಂದ ಅತಿ ಹೆಚ್ಚು ಆದಾಯದ ರಾಷ್ಟ್ರವಾಗಿ ಪರಿವರ್ತನೆಗೊಂಡಿದೆ, ಇದು ಪ್ರತಿವರ್ಷ ಸರಾಸರಿ 7% ಜಿಡಿಪಿ ಪ್ರಗತಿಯನ್ನು ಸಾಧಿಸಿದೆ ಸಿಂಗಾಪುರ್ ಮಾನವ ಸಂಪನ್ಮೂಲ ವಿಕಾಸದಲ್ಲಿ ಅಗ್ರಣಿಯಾಗಿದೆ, 2020ರ ವಿಶ್ವ ಬ್ಯಾಂಕ್ ಹ್ಯೂಮನ್ ಕ್ಯಾಪಿಟಲ್ ಇಂಡೆಕ್ಸ್ ನಲ್ಲಿ ಸರ್ವೋಚ್ಛ ಸ್ಥಾನವನ್ನು ಪಡೆದಿದೆ.
2 ಲಕ್ಸೆಂಬರ್ಗ್.
ಲಕ್ಸೆಂಬರ್ಗ್ ಪ್ರಪಂಚದ ಎರಡನೇ ಅತಿ ದೊಡ್ಡ ಶ್ರೀಮಂತರ ರಾಷ್ಟ್ರವಾಗಿದೆ, ಈ ರಾಷ್ಟ್ರ ತನ್ನ ಬಲಿಷ್ಠ ಬ್ಯಾಂಕಿಂಗ್ ಹಾಗೂ ಹಣಕಾಸು ಕ್ಷೇತ್ರಕ್ಕೆ ಹೆಸರುವಾಸಿಯಾಗಿದೆ 2025 ರತನಕ ಇದು ಪ್ರತಿ ವ್ಯಕ್ತಿ ಜಿಡಿಪಿಯಲ್ಲಿ ಎರಡನೇ ಸ್ಥಾನದಲ್ಲಿದೆ, ಐತಿಹಾಸಿಕವಾಗಿ ಗ್ರಾಮೀಣವಾಗಿದ್ದ ಲಕ್ಸೆಂಬರ್ಗ್ 19 ನೇ ಶತಮಾನದಲ್ಲಿ ಪ್ರಮುಖ ಹಣಕಾಸಿನ ವ್ಯವಹಾರದ ಅರ್ಥ ವ್ಯವಸ್ಥೆಯಾಗಿ ಬದಲಾಯಿತು, ಇದು ಅಂತರ್ರಾಷ್ಟ್ರೀಯ ಬ್ಯಾಂಕಿಂಗ್ಗೆ ಹೆಸರಾಗಿದೆ ತನ್ನ ಸ್ಥಿರ ರಾಜಕೀಯ, ಕುಶಲ ಕಾರ್ಯಬಲ, ಹಾಗೂ ಬ್ಯಾಂಕಿಂಗ್ ಗೌಪ್ಯತೆಯೊಂದಿಗೆ ಉದ್ಯಮಗಳನ್ನು ಆಕರ್ಷಿಸುತ್ತದೆ. ತನ್ನ ಈ ಬ್ಯಾಂಕಿಂಗ್ ಗೌಪ್ಯತೆಯಿಂದ ಇದನ್ನು ತೆರಿಗೆದಾರರ ಸ್ವರ್ಗವೆಂದು ಹೇಳಲಾಗುತ್ತದೆ. ಇದು ಅತಿ ಕಡಿಮೆ ಕೃಷಿ ಕ್ಷೇತ್ರ ಹೊಂದಿದ್ದರು, ಪ್ರಪಂಚದ ಅತಿ ದೊಡ್ಡ ಕೃಷಿ ಉತ್ಪಾದಕ ರಾಷ್ಟ್ರವಾಗಿದೆ.
3 ಐರ್ಲೆಂಡ್.
ಐರ್ಲೆಂಡ್ ಪ್ರಪಂಚದ ಮೂರನೇ ದೊಡ್ಡ ಶ್ರೀಮಂತ ರಾಷ್ಟ್ರವಾಗಿದೆ. 1995 ರಿಂದ 2007 ರವರೆಗೆ ಅರ್ಥ ವ್ಯವಸ್ಥೆಯಲ್ಲಿ ಅತಿ ವೇಗವಾಗಿ ಬೆಳೆದಿದ್ದರಿಂದ ಇದಕ್ಕೆ ಸೆಲ್ಟಿಕ್ ಟೈಗರ್ ನ ಹೆಸರು ಬಂದಿದೆ, ಇದು ಯುರೋಪ್ನ ಅತಿ ಬಡ ರಾಷ್ಟ್ರದಿಂದ ಅತಿ ಶ್ರೀಮಂತ ರಾಷ್ಟ್ರವಾಗಿ ಬದಲಾಗಿದೆ, ಇದಕ್ಕೆ ಪ್ರಮುಖ ಕಾರಣ ಕಡಿಮೆ ಕಾರ್ಪೊರೇಟ್ ಟ್ಯಾಕ್ಸ್ ವಿದೇಶಿ ಹೂಡಿಕೆ ಯುರೋಪಿಯನ್ ಸಂಘದ ಸದಸ್ಯತ್ವ ಹಾಗೂ ಸಾಮಾಜಿಕ ಭಾಗಿದಾರಿ ಇದರ ಕಡಿಮೆ ಟ್ಯಾಕ್ಸ್ ಹಾಗೂ ಕುಶಲ ಇಂಗ್ಲಿಷ್ ಭಾಷೆಯ ಮಾನವ ಸಂಪನ್ಮೂಲದಿಂದ ಅಮೆರಿಕ ನಿಗಮಗಳ ಹೂಡಿಕೆಯನ್ನು ತನ್ನಡೆಗೆ ಆಕರ್ಷಿಸಿತು, ಮಾಹಿತಿ ತಂತ್ರಜ್ಞಾನ, ಫಾರ್ಮಸುಟಿಕಲ್, ಹಣಕಾಸು ಸೇವೆಗಳಲ್ಲಿ ಅತಿಯಾದ ಪ್ರಗತಿಯನ್ನು ಸಾಧಿಸಿದೆ ಇದರೊಂದಿಗೆ ಶಿಕ್ಷಣದಲ್ಲಿ ಮಹತ್ವಪೂರ್ಣ ಹೂಡಿಕೆ ಮಾಡಿದ್ದರಿಂದ, ಕುಶಲ ಕಾರ್ಯ ಬಲವನ್ನು ಹೆಚ್ಚಿಸಿ ದೇಶದ ಆರ್ಥಿಕ ಪ್ರಗತಿಯಲ್ಲಿ ಯೋಗದಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿತು.
4 ಕತಾರ್.
ಕತಾರ್ ಪ್ರಪಂಚದ ನಾಲ್ಕನೇ ಶ್ರೀಮಂತರ ರಾಷ್ಟ್ರವಾಗಿದೆ. ಕತಾರ್ ಅರ್ಥ ವ್ಯವಸ್ಥೆಯನ್ನು ಯಾವ ರೀತಿ ಅಂದಾಜಿಸಬಹುದೆಂದರೆ, ಯುನೈಟೆಡ್ ಕಿಂಗ್ಡಮ್ನ ರಾಜಧಾನಿ ಲಂಡನ್ ನ ಅಧಿಕಾಂಶ ದುಬಾರಿ ಸ್ಥಳಗಳಲ್ಲಿ ಕತಾರ್ನ ಸ್ವಮಿತ್ವವಿದೆ. ಕತಾರ್ನ ಅರ್ಥ ವ್ಯವಸ್ಥೆಯಲ್ಲಿ ಸ್ಥಿರತೆ ಮತ್ತು ಉಲ್ಲೇಖನೀಯ ವೃದ್ಧಿ ಗಮನಿಸಬಹುದು, ಮುಖ್ಯರೂಪದಲ್ಲಿ ಇದು ತೈಲ ಗ್ಯಾಸ್ ಭಂಡಾರ ದಿಂದಾಗಿದೆ. ಇದು ಪ್ರಪಂಚದ ಮೂರನೇ ಅತಿ ದೊಡ್ಡ ಗ್ಯಾಸ್ ರಫ್ತುದಾರ ರಾಷ್ಟ್ರವಾಗಿದೆ, ಹಾಗೂ ಇದರ ಬಳಿ ಪ್ರಪಂಚದ ಮೂರನೇ ದೊಡ್ಡ ಗ್ಯಾಸ್ ಬಂಡಾರವಿದೆ. ತೈಲಬೆಲೆಯ ಏರಿಳಿತಗಳಿಂದ ಅರ್ಥವ್ಯವಸ್ಥೆಯ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕತರ್ ನ್ಯಾಷನಲ್ ವಿಷನ್ 20030ರ ಮೂಲಕ ತನ್ನ ಅರ್ಥವ್ಯವಸ್ಥೆಯಲ್ಲಿ ವಿವಿಧತೆಯನ್ನು ತರುತ್ತಿದೆ. ಇದು ಖಾಸಗಿ ಕ್ಷೇತ್ರ ಹಾಗೂ ಜ್ಞಾನ ಆಧಾರಿತ ಅರ್ಥ ವ್ಯವಸ್ಥೆಯ ವಿಕಾಸತೆಯ ವಿಕಾಸದ ಗುರಿಯನ್ನು ಹೊಂದಿದೆ. ಪಕ್ಕದ ರಾಷ್ಟ್ರಗಳ ಆರ್ಥಿಕ ಪ್ರತಿಬಂಧಗಳ ಹೊರತಾಗಿಯೂ, ಪ್ರಮುಖ ಏಷ್ಯಾದ ಮಾರುಕಟ್ಟೆಗಳಲ್ಲಿ ಉತ್ತಮ ಮಾರುಕಟ್ಟೆ ಸಂಬಂಧ ಹೊಂದಿರುವುದರಿಂದ ಆರ್ಥಿಕ ವೃದ್ಧಿ ಕಾಯಂ ಆಗಿರಿಸಲು ಸಾಧ್ಯವಾಗಿದೆ.
5 ನಾರ್ವೆ. 
ಯುರೋಪಿನ ನಾರ್ವೆ ಪ್ರಪಂಚದ ಐದನೇ ಅತಿ ದೊಡ್ಡ ಶ್ರೀಮಂತರ ರಾಷ್ಟ್ರವಾಗಿದೆ. ಇದು ವಿಕಾಸ ಹಾಗೂ ನಿಶ್ಚಿತ ಅರ್ಥ ವ್ಯವಸ್ಥೆಯ ಜೊತೆಗೆ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಗ್ಯಾಸ್ ಕ್ಷೇತ್ರದಲ್ಲೂ ಸಮೃದ್ಧವಾಗಿದೆ. 2025 ರ ತನಕ ಇದರ ಜಿಡಿಪಿ 540 ಬಿಲಿಯನ್ ಯು ಎಸ್ ಡಿ ಆಗಿದೆ, ಸರಾಸರಿ ವರಮಾನ 89690 ಯುಎಸ್ಡಿ ಆಗಿದೆ. ಇದು ಬೇರೆ ಯುರೋಪಿಯನ್ ದೇಶಗಳಿಗಿಂತ ಕಡಿಮೆ ನಿರುದ್ಯೋಗ ದರವನ್ನು ಹೊಂದಿದೆ ಜನಜೀವನ ಉನ್ನತ ಸ್ತರದಲ್ಲಿದೆ.
6 ಸ್ವಿಡ್ಜರ್ಲ್ಯಾಂಡ್
ಸ್ವಿಡ್ಜರ್ಲ್ಯಾಂಡ್ ಪ್ರಪಂಚದ ಆರನೇ ಶ್ರೀಮಂತ ರಾಷ್ಟ್ರ. ಇದು ತನ್ನ ಸಂಪತ್ತು ಹಾಗೂ ಉಚ್ಚ ಜೀವನ ಸ್ತರಕ್ಕೆ ಹೆಸರುವಾಸಿಯಾಗಿದೆ. ಈ ರಾಷ್ಟ್ರದಲ್ಲಿ 8 ಲಕ್ಷಕ್ಕೂ ಅಧಿಕ ಕೋಟ್ಯಾಧಿಪತಿಗಳು ಇದ್ದಾರೆ, ಇದು ಪ್ರಪಂಚದ ಕೇವಲ 0.1% ಜನಸಂಖ್ಯೆಯನ್ನು ಹೊಂದಿದ್ದರು ಪ್ರಪಂಚದ ಅತಿ ಶ್ರೀಮಂತರಲ್ಲಿ 1.7% ಜನ ಸ್ವಿಡ್ಜರ್ಲ್ಯಾಂಡ್ ರಾಷ್ಟ್ರದಿಂದಾಗಿದ್ದಾರೆ. ಇದು ಬಲಿಷ್ಠ ಬ್ಯಾಂಕಿಂಗ್ ವ್ಯವಸ್ಥೆ, ನವೀನತೆ ಹಾಗೂ ರಾಜಕೀಯ ಸ್ಥಿರತೆ ಇದಕ್ಕೆ ಪ್ರಮುಖ ಕಾರಣವಾಗಿದೆ.
7 ಬ್ರುನೈ. 
ಬ್ರುನೈ ಪ್ರಪಂಚದ 7ನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಇದು ತನ್ನ ಪೆಟ್ರೋಲಿಯಂ ಹಾಗೂ ಗ್ಯಾಸ್ ಕ್ಷೇತ್ರದ ಮೇಲೆ ಹೆಚ್ಚು ನಿರ್ಭರವಾಗಿದೆ, ಇದರ ಜನಸಂಖ್ಯೆ 4,50,000 ಮಾತ್ರವಾಗಿದೆ, ಇದು ದಕ್ಷಿಣ ಪೂರ್ವ ಏಷ್ಯಾದಲ್ಲಿ ಮೂರನೇ ಅತಿ ದೊಡ್ಡ ತೈಲ ಉತ್ಪಾದಕ ರಾಷ್ಟ್ರವಾಗಿದೆ. ಇದು ಮುಖ್ಯವಾಗಿ ಜಪಾನ್ ಕೊರಿಯ ದೇಶಗಳಿಗೆ ತನ್ನ ತೈಲ ಉತ್ಪನ್ನಗಳನ್ನು ರಫ್ತು ಮಾಡುತ್ತದೆ, ತನ್ನ ಇತರೆ ಸಂಪನ್ಮೂಲಗಳಿಗಿಂತ ತೈಲ ಹಾಗೂ ಗ್ಯಾಸ್ಗಳಿಗೆ ಹೆಚ್ಚಾಗಿ ನಿರ್ಭರವಾಗಿರುವುದರಿಂದ ಭವಿಷ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
8 ಗಯಾನಾ. 
ಗಯಾನಾ ಪ್ರಪಂಚದ ಎಂಟನೇ ಅತಿ ಶ್ರೀಮಂತ ರಾಷ್ಟ್ರ. ಇದರ ಅರ್ಥ ವ್ಯವಸ್ಥೆಯಲ್ಲಿ ಉಲ್ಲೇಖನಿಯ ಪ್ರಗತಿ ಆಗಿದೆ. 2018ರಲ್ಲಿ ಮಹತ್ವಪೂರ್ಣ ತೈಲ ಬಂಡಾರದ ಶೋಧದಿಂದ 2025 ರ ತನಕ ದೇಶದ ಪ್ರತಿ ವ್ಯಕ್ತಿ ಸರಾಸರಿ ವರಮಾನ 94,258 ಯುಎಸ್ಡಿ ತಲುಪಿದೆ. 2021 ರಲ್ಲಿ ಗುಯಾನದ ಅಭಿವೃದ್ಧಿ ದರ 19.9%ಶೇಕಡದಷ್ಟು ಸಾಧಿಸಿತ್ತು, ಇದು ಗುಯಾನವನ್ನು ಅತಿ ವೇಗವಾಗಿ ಬೆಳೆಯುವ ಅರ್ಥ ವ್ಯವಸ್ಥೆಯ ರಾಷ್ಟ್ರಗಳ ಪಟ್ಟಿಗೆ ಸೇರಿಸಿತು, ತೆರಿಗೆ ಸುಧಾರಣೆ, ಗಣಿಗಾರಿಕೆ ಹಾಗೂ ತೈಲ ಅನ್ವೇಷಣೆಗೆ ಉತ್ತಮ ಕಾನೂನುಗಳು, ಹಾಗೂ ರಾಜಕೀಯ ಸ್ಥಿರತೆ, ವಿದೇಶಿ ಹೂಡಿಕೆಯನ್ನು ಹೆಚ್ಚು ಮಾಡಿದೆ.
9 ಅಮೇರಿಕಾ. (ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ)
ಅಮೇರಿಕಾ ಪ್ರಪಂಚದ ಒಂಬತ್ತನೇ ಶ್ರೀಮಂತ ರಾಷ್ಟ್ರವಾಗಿದೆ. 2025ರ ಜಿಡಿಪಿಯ ಪ್ರಕಾರ ಪ್ರಪಂಚದ ಅತಿ ದೊಡ್ಡ ಅರ್ಥ ವ್ಯವಸ್ಥೆಯನ್ನು ಹೊಂದಿರುವ ಏಕೈಕ ರಾಷ್ಟ್ರವಾಗಿದೆ. ಇದರ ಅರ್ಥ ವ್ಯವಸ್ಥೆಯ ಪ್ರಮುಖ ಘಟಕ ಇದರ ಸೇವ ಘಟಕವಾಗಿದೆ, ಇದು ಶೇಕಡ 80ರಷ್ಟು ಕೊಡುಗೆ ನೀಡುತ್ತದೆ, ಹಾಗೂ ಶೇಕಡ 80ರಷ್ಟು ಉದ್ಯೋಗ ಉದ್ಯೋಗವನ್ನು ಕೂಡ ನೀಡಿದೆ. ತನ್ನ ಬಲಿಷ್ಠ ಸೇನಾ ಶಕ್ತಿಯಿಂದ ಪ್ರಪಂಚದ ಇತರ ರಾಷ್ಟ್ರಗಳ ಮೇಲು ಪ್ರಭಾವ ಹಾಗೂ ಹಿಡಿತವನ್ನು ಸಾಧಿಸಿದೆ.
10 ಡೆನ್ಮಾರ್ಕ್. 
ಡೆನ್ಮಾರ್ಕ್ ಪ್ರಪಂಚದ ಹತ್ತನೇ ಶ್ರೀಮಂತರ ರಾಷ್ಟ್ರವಾಗಿದೆ. ಇದು ಉನ್ನತ ವರಮಾನ ಉನ್ನತ ಅರ್ಥವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಸರ್ವಿಸ್ ಸೆಕ್ಟರ್ ಶೇಕಡ 80 ರಷ್ಟು ಉದ್ಯೋಗವನ್ನು ನೀಡುತ್ತದೆ ಈ ರಾಷ್ಟ್ರ ನಾರಡಿಕ್ ವಿಧಾನವನ್ನು ಅನುಸರಿಸುತ್ತದೆ, ಇಲ್ಲಿ ಉನ್ನತ ಹಾಗೂ ವ್ಯಾಪಕ ಸರ ಕಾರಿ ಸೇವೆಗಳು ಲಭ್ಯವಿದೆ, ಹಾಗಾಗಿ ಜನರಿಗೆ ಒಂದು ಬಲಿಷ್ಠ ಸಾಮಾಜಿಕ ಸುರಕ್ಷತೆಯನ್ನು ಒದಗಿಸುತ್ತದೆ, ಇದು ಉತ್ತಮ ಮಾನವ ವಿಕಾಸದ ಸೂಚ್ಯಂಕದಲ್ಲಿ ಉಲ್ಲೇಖನೀಯ ರೂಪದಲ್ಲಿ ಸ್ಥಿರವಾಗಿದೆ.






Leave a Reply