ರಷ್ಯಾದಿಂದ ತೈಲ ಖರೀದಿ: ದೊಡ್ಡಣ್ಣ ಅಂತ ಅನಿಸಿಕೊಂಡಿರುವ ಅಮೆರಿಕ ಭಾರತವೇನಾದರೂ ರಷ್ಯಾದಿಂದ ತೈಲ ಖರೀದಿಯ ಖರೀದಿಯನ್ನು ನಿಲ್ಲಿಸದಿದ್ದರೆ ಭಾರತದ ಮೇಲೆ ಇನ್ನೂ ಹೆಚ್ಚು ಟ್ಯಾರಿಫ್ ವಿಧಿಸಲಾಗುವುದು ಎಂಬ ಎಚ್ಚರಿಕೆಯನ್ನು ಭಾರತಕ್ಕೆ ನೀಡಿದೆ. ಅಮೇರಿಕ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡದಂತೆ ಬಯಸುತ್ತಿದೆ. ಕೆಲವು ವಾರಗಳಿಂದ ಭಾರತದ ತೈಲ ರಿಫೈನರಿಗಳು ರಷ್ಯಾದಿಂದ ತೈಲ ಆಮದುವನ್ನು ಕಡಿಮೆಗೊಳಿಸಿವೆ, ಅದರೊಂದಿಗೆ ಕೆಲವು ಸುದ್ದಿಗಳ ಪ್ರಕಾರ ಭಾರತ ತನ್ನ ಸರ್ಕಾರಿ ಕಂಪನಿಗಳಿಗೆ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಸೂಚಿಸಿದೆ, ಇಲ್ಲಿ ಟ್ರಂಪ್ ಯಾವೆಲ್ಲಾ ವಿಷಯಗಳಿಂದ ಭಾರತ ರಷ್ಯಾದಿಂದ ತೈಲ ಖರೀದಿಯ ಬಗ್ಗೆ ಸಿಟ್ಟು ಕೊಂಡಿದ್ದಾರೆ ಮುನಿಸಿಕೊಂಡಿದ್ದಾರೆ ಅನ್ನುವುದನ್ನು ಗಮನಿಸುವುದಾದರೆ, ಒಂದು ಕಡೆ ಅಮೇರಿಕ, ರಷ್ಯಾಗೆ ಯಕ್ರೇನ್ ಜೊತೆ ಯುದ್ಧ ನಿಲ್ಲಿಸುವ ಡೆಡ್ ಲೈನ್ ಬಗ್ಗೆ ರಷ್ಯಾ ಯಾವುದೇ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಭಾರತ ಮುಂದಿನ ದಿನಗಳಲ್ಲಿ ಅಮೆರಿಕದ ಒತ್ತಡಕ್ಕೆ ಸಿಲುಕಿ ರಷ್ಯಾದಿಂದ ತೈಲ ಖರೀದಿ ಸ್ಥಗಿತಗೊಳಿಸಿದರೆ ಭಾರತದ ಮೇಲೆ ಯಾವೆಲ್ಲ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಈ ದಿನ ನಾವು ತಿಳಿಯೋಣ.
ನಿಮಗೆಲ್ಲ ತಿಳಿದಿರಬಹುದು 2023ರಲ್ಲಿ ರಷ್ಯಾ ಯುಕ್ರೇನ್ ಯುದ್ಧ ಆರಂಭವಾದ ನಂತರ ಭಾರತ ರಷ್ಯಾದಿಂದ ತೈಲ ಖರೀದಿಯನ್ನು ಆರಂಭಿಸಿತು, ಆ ಸಮಯದಲ್ಲಿ ಭಾರತ ಹಾಗೂ ಚೀನಾ ರಷ್ಯಾ ದಿಂದ ಅತಿ ದೊಡ್ಡ ತೈಲ ಖರೀದಿದಾರ ರಾಷ್ಟ್ರವಾಗಿದ್ದವು. ಈ ಎರಡು ದೇಶಗಳಿಗೆ ರಷ್ಯಾ ಅತಿ ಕಡಿಮೆ ಬೆಲೆಗೆ ತೈಲವನ್ನು ಪೂರೈಸಿತು, ಇದರಿಂದಾಗಿ ಈ ಎರಡು ರಾಷ್ಟ್ರಗಳಿಗೆ ತಮ್ಮ ವಿದೇಶಿ ವಿನಿಮಯದಲ್ಲಿ ಬಾರಿ ಉಳಿತಾಯ ಕಂಡಿದೆ, ವಿಶೇಷವಾಗಿ ಇಲ್ಲಿ ಪ್ರಪಂಚದ ಹಲವಾರು ಪ್ರಮುಖ ಆರ್ಥಿಕತೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದವು ಆದರೆ ಭಾರತಕ್ಕೆ ಕಡಿಮೆ ಬೆಲೆಗೆ ರಷ್ಯಾದ ತೈಲ ಪೂರೈಕೆ ಬಹಳ ಮಹತ್ವಪೂರ್ಣ ಧನಾತ್ಮಕ ಪರಿಣಾಮವನ್ನು ಬೀರಿತು.
ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಜೋಬೈಡನ್ ರಾಷ್ಟ್ರಪತಿಯಾಗಿದ್ದಾಗಲೂ ಕೂಡ ಭಾರತಕ್ಕೆ ಒತ್ತಡವನ್ನು ಹೇರಿದ್ದರು, ಆದರೆ ಟ್ರಂಪ್ ಅಧಿಕಾರಕ್ಕೆ ಬರುವ ಸೂಚನೆ ಸಿಕ್ಕಿದ ಕೂಡಲೇ ಇವರು ಭಾರತಕ್ಕೆ ರಿಯಾಯಿತಿ ನೀಡುವ ಭರವಸೆ ಭಾರತಕ್ಕೆ ಇತ್ತು, ಆದರೆ ಇದು ಇವತ್ತಿಗೆ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿದೆ , ಸುದ್ದಿಗಳ ಪ್ರಕಾರ ರಷ್ಯಾದಿಂದ ಭಾರತ ತೈಲ ಖರೀದಿ ಮಾಡಿದರೆ, ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ದೊಡ್ಡ ಪ್ರಮಾಣದ ಟ್ಯಾರಿಫ್ ಹಾಗೂ ನಿರ್ಬಂಧಗಳನ್ನು ವಿಧಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಇತ್ತೀಚಿಗೆ ಬಂದ ಸುದ್ದಿಗಳಲ್ಲಿ ಭಾರತದ ಸರ್ಕಾರಿ ಕಂಪನಿಗಳು ಸಂಪೂರ್ಣವಾಗಿ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿವೆ, ಕೇವಲ ಕೆಲವು ಪ್ರೈವೇಟ್ ಕಂಪನಿಗಳು ಮಾತ್ರ ರಷ್ಯಾದಿಂದ ತೈಲವನ್ನು ಖರೀದಿಸುತ್ತಿವೆ, ಹಾಗಾಗಿ ಇಂದು ಭಾರತ ಆಫ್ರಿಕಾದಿಂದ ಹಿಡಿದು ಲ್ಯಾಟಿನ್ ಅಮೆರಿಕಾದವರೆಗೆ ಕಡಿಮೆ ಬೆಲೆಗೆ ತೈಲ ರಫ್ತು ಮಾಡುವ ದೇಶಗಳ ಕಡೆಗೆ ಮುಖ ಮಾಡುತ್ತಿದೆ. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದರೆ ಭಾರತಕ್ಕೆ ಆರ್ಥಿಕ ರೂಪದಲ್ಲೂ ಹಾಗೂ ಸಾಮರಿಕ, ರಾಜತಾಂತ್ರಿಕ ರೂಪದಲ್ಲೂ ಬಹಳ ನಷ್ಟ ಹಾಗೂ ಅಪಾಯ ಉಂಟಾಗಲಿದೆ.
ಭಾರತದಲ್ಲಿ ತೈಲಬೆಲೆ ಹೆಚ್ಚಾಗುವ ಸಾಧ್ಯತೆ!
ಇಲ್ಲಿಯವರೆಗೆ ಭಾರತಕ್ಕೆ ರಷ್ಯಾ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಪೂರೈಕೆ ಮಾಡುತ್ತಿತ್ತು , 2022 ರಿಂದ ಇಲ್ಲಿಯ ತನಕ ರಷ್ಯಾ ಭಾರತಕ್ಕೆ ಅತಿ ಕಡಿಮೆ ಬೆಲೆಗೆ ದೊಡ್ಡ ಪ್ರಮಾಣದ ತೈಲವನ್ನು ಪೂರೈಕೆ ಮಾಡುತ್ತಿದೆ, ಒಂದು ವೇಳೆ ಭಾರತ ರಷ್ಯಾದೊಂದಿಗೆ ತೈಲ ಖರೀದಿಯನ್ನು ನಿಲ್ಲಿಸಿದರೆ, ಭಾರತಕ್ಕೆ ಇತರ ಕಡಿಮೆ ಬೆಲೆಯ ತೈಲ ಪೂರೈಕೆದಾರ ರಾಷ್ಟ್ರಗಳ ವಿಕಲ್ಪದ ಕಡೆಗೆ ಮುಖ ಮಾಡಬೇಕಾಗುತ್ತದೆ, ಅಥವಾ ಸೌದಿ ಅರೇಬಿಯಾ, ಇರಾಕ್ ಮುಂತಾದ ಕೊಲ್ಲಿ ರಾಷ್ಟ್ರಗಳಿಂದ ತೈಲ ಖರೀದಿಯನ್ನು ಮಾಡಬೇಕಾಗುತ್ತದೆ ಆದರೆ ಈ ರಾಷ್ಟ್ರಗಳು ದುಬಾರಿ ಬೆಲೆಗೆ ತೈಲವನ್ನು ಪೂರೈಸುತ್ತಿವೆ, ಇದರಿಂದಾಗಿ ಭಾರತ ಇಂಧನದ ಆಮದಿನ ಮೇಲೆ ತನ್ನ ಹೆಚ್ಚಿನ ಪ್ರಮಾಣದ ವಿದೇಶಿ ವಿನಿಮಯ ವಿನಿಮಯವನ್ನು ಖರ್ಚು ಮಾಡಬೇಕಾಗುತ್ತದೆ, ಇದು ಭಾರತದ ಅರ್ಥವ್ಯವಸ್ಥೆಗೆ ಒತ್ತಡವನ್ನು ಸೃಷ್ಟಿಸುತ್ತದೆ.
ಭಾರತದ ಉದ್ಯಮದ ಕ್ಷೇತ್ರದ ಮೇಲೆ ಯಾವ ಪರಿಣಾಮ ಬೀರಬಹುದು?
ಭಾರತವು ತನ್ನ ಇಂಧನ ಅವಶ್ಯಕತೆಯ ಶೇಕಡ 80 ರಷ್ಟು ಭಾಗ ಆಮದಿನ ಮೇಲೆ ನಿರ್ಭರವಾಗಿದೆ. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದ ಕೂಡಲೇ ಭಾರತದ ಇಂಧನದ ಪೂರೈಕೆ ಹಾಗೂ ಪೂರೈಕೆಯ ಮೇಲೆ ಅನಿಶ್ಚಿತತೆ ಉಂಟಾಗಿದೆ, ಇದರಿಂದಾಗಿ ಉದ್ಯಮ ಕ್ಷೇತ್ರದಲ್ಲಿ ಉತ್ಪಾದನೆ ಹಾಗೂ ಉಪಭೋಗತೆಯ ಮೇಲೆ ಪರಿಣಾಮ ಉಂಟಾಗಬಹುದು. ರಷ್ಯಾದ ವಿಕಲ್ಪದ ರೂಪದಲ್ಲಿ ಬೇರೆ ದೇಶದೊಂದಿಗೆ ತೈಲ ಖರೀದಿಯ ಸುನಿಶ್ಚಿತತೆಯನ್ನು ಖಾತರಿಗೊಳಿಸಲು ಕೆಲವು ಸಮಯಗಳು ತೆಗೆದುಕೊಳ್ಳಬಹುದು, ವಿಶ್ವ ಸ್ತರದಲ್ಲಿ ಕಚ್ಚಾತೈಲದ ಮಾರುಕಟ್ಟೆಯಲ್ಲಿ ಉಂಟಾಗುವ ಅಸ್ಥಿರತೆ ಭಾರತದ ಮೇಲೆ ದೊಡ್ಡ ಪರಿಣಾಮವನ್ನೇ ಬೀರಬಹುದು.
ವಿದೇಶಿ ಮುದ್ರಾ ಭಂಡಾರ ಕ್ಷೀಣಿಸಬಹುದು!
ರಷ್ಯಾ ದೊಂದಿಗೆ ಭಾರತದ ವ್ಯಾಪಾರ ಅಂಶಿಕವಾಗಿ ರೂಪಾಯಿ ಮೂಲಕ ನಡೆಯುತ್ತದೆ, ಇದು ಭಾರತದ ವಿದೇಶಿ ಮುದ್ರಾ ಬಂಡಾರದ ಮೇಲೆ ಒತ್ತಡವನ್ನು ಕಡಿಮೆಗೊಳಿಸಿದೆ, ಬೇರೆ ದೇಶದೊಂದಿಗೆ ತೈಲ ಖರೀದಿಗೆ ನಾವು ಡಾಲರ್ ಮುಖಾಂತರ ಪಾವತಿ ಮಾಡಬೇಕಾಗುತ್ತದೆ ಇದರಿಂದಾಗಿ ಭಾರತದ ವಿದೇಶಿ ಮುದ್ರಾ ಬಂಡಾರ ಅತಿ ವೇಗವಾಗಿ ಕುಸಿಯುತ್ತದೆ ಇದರಿಂದಾಗಿ ರೂಪಾಯಿಯು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಕೆಲವೊಂದು ಆರ್ಥಿಕ ತಜ್ಞರ ಪ್ರಕಾರ ಈ ಸ್ಥಿತಿಯಲ್ಲಿ ಭಾರತದ ವಿದೇಶಿ ಮುದ್ರಾ ಬಂಡಾರ ಖಾಲಿ ಆಗಬಹುದು.
ರಷ್ಯಾದ ಜೊತೆಗಿನ ಮೈತ್ರಿಗೆ ದಕ್ಕೆ!
ರಷ್ಯಾ ಬಹಳ ದೀರ್ಘಕಾಲದಿಂದಲೂ ಭಾರತದ ವಿಶ್ವಾಸಾರ್ಹ ಮಿತ್ರ ರಾಷ್ಟ್ರವಾಗಿದೆ, ಇದು ಬಹಳ ಸಮಯದಿಂದ ಭಾರತದ ಸಾಮರಿಕ ಹಾಗೂ ರಕ್ಷಣಾ ಭಾಗಿದಾರ ರಾಷ್ಟ್ರವಾಗಿದೆ. ಈ ರಾಷ್ಟ್ರ ಭಾರತಕ್ಕೆ ಪ್ರತಿ ಸಂಕಷ್ಟದ ಸಮಯದಲ್ಲೂ ಭಾರತದ ಜೊತೆ ಸಹಕರಿಸಿದೆ. ಭಾರತ ಬಹಳ ದೀರ್ಘಕಾಲದಿಂದಲೂ ರಕ್ಷಣೆ ಹಾಗೂ ಶಕ್ತಿ ಸಂಪನ್ಮೂಲ ಕ್ಷೇತ್ರಗಳಲ್ಲಿ ರಷ್ಯಾದ ಮೇಲೆ ನಿರ್ಭರವಾಗಿದೆ. ಒಂದು ವೇಳೆ ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದರೆ ಎರಡು ರಾಷ್ಟ್ರಗಳ ನಡುವೆ ವಿಶ್ವಾಸದ ಕೊರತೆ ಉಂಟಾಗಬಹುದು, ಇದರಿಂದ ಭಾರತದ ರಕ್ಷಣಾ ಉತ್ಪನ್ನಗಳ (S-400 ಮಿಸೈಲ್ ಡಿಫೆನ್ಸ್ ಸಿಸ್ಟಮ್) ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಬಹುದು, ಇದು ಭಾರತಕ್ಕೆ ರಕ್ಷಣೆಯ ವಿಷಯದಲ್ಲಿ ಉತ್ತಮವಲ್ಲ.
ಅಮೆರಿಕ ಹಾಗೂ ಭಾರತದ ಸಂಬಂಧ ಸುಧಾರಣೆಯಾಗಬಹುದೇ?
ಅಮೇರಿಕವು ಭಾರತದ ಜನತೆ ಹೇಗೆ ವ್ಯವಹರಿಸುತ್ತಿದೆ ಎಂದರೆ ಅದು ಕೇವಲ ತನ್ನ ಹಿತಾಸಕ್ತಿಗೆ ಪ್ರಮುಖ ಮಹತ್ವವನ್ನು ನೀಡುತ್ತದೆ, ಹಾಗಾಗಿ ಇದು ಮಿತ್ರ ದೇಶಗಳಿಗೆ ಯಾವಾಗಲೂ ಒತ್ತಡವನ್ನು ಸೃಷ್ಟಿಸಿ ತನ್ನ ಕಾರ್ಯವನ್ನು ಸಿದ್ಧಿಗೊಳಿಸುತ್ತದೆ. ಅಮೆರಿಕಾದ ಜೊತೆ ಭಾರತದ ಸಂಬಂಧ ಮೊದಲಿನಿಂದಲೂ ಹಲವಾರು ಬಾರಿ ಏರಿಳಿತವನ್ನು ಕಂಡಿದೆ. ಅಮೆರಿಕ ಯಾವತ್ತಿಗೂ ಕೂಡ ಭಾರತದ ವಿಶ್ವಾಸಾರ್ಹ ಮಿತ್ರನಾಗಿರಲಿಲ್ಲ, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದರೆ ಭಾರತ ಹಾಗೂ ಅಮೆರಿಕದ ಸಂಬಂಧ ಘನಿಷ್ಠ ಗೊಳ್ಳುತ್ತದೆ ಎನ್ನುವ ಯಾವುದೇ ಭರವಸೆ ಇರುವುದಿಲ್ಲ, ಆದರೆ ಇದರಿಂದ ಭಾರತದ ಸ್ವಯಂ ವಿದೇಶಿ ನೀತಿಗಳು ದುರ್ಬಲಗೊಳ್ಳುವುದು, ಪ್ರಪಂಚದಲ್ಲಿ ಭಾರತದ ಮೇಲಿರುವ ದೃಷ್ಟಿಕೋನ ಬದಲಾಗುವುದು.
ರಷ್ಯಾ ಚೀನಾ ಸಂಬಂಧ ಬಲಿಷ್ಟವಾಗುವುದು! ರಷ್ಯಾ ಹಾಗೂ ಚೀನಾದ ಸಂಬಂಧದಲ್ಲಿ ವೃದ್ಧಿ ಭಾರತಕ್ಕೆ ಚಿಂತೆಗೀಡು ಮಾಡುವ ವಿಷಯವಾಗಬಹುದು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದರೆ ರಷ್ಯಾ ಹಾಗೂ ಚೀನಾದ ಸಂಬಂಧವು ಗಟ್ಟಿಯಾಗಬಹುದು, ಇದರಿಂದಾಗಿ ಭಾರತಕ್ಕೆ ತೊಂದರೆ ಉಂಟಾಗಬಹುದು ಯಾಕೆಂದರೆ ಚೀನಾ ಮೊದಲಿನಿಂದಲೂ ರಷ್ಯಾದ ಬಳಿ ತೈಲವನ್ನು ಖರೀದಿಸುತ್ತಿದೆ ಇದರಿಂದ ಭಾರತ ಹಾಗೂ ಚೀನಾದ ಗಡಿಯಲ್ಲಿ ಒತ್ತಡದ ಸ್ಥಿತಿ ನಿರ್ಮಾಣವಾಗಬಹುದು.
ಪ್ರಪಂಚದಲ್ಲಿ ಭಾರತ ಒತ್ತಡಕ್ಕೆ ಮಣಿಯುವ ರಾಷ್ಟ್ರವಾಗಿ ಕಾಣಬಹುದು.
ಭಾರತ ಇತ್ತೀಚಿನ ವರ್ಷಗಳಲ್ಲಿ ಜಿ20, ಬ್ರಿಕ್ಸ್ , ಎಸ್ ಸಿ ಒ ಮುಂತಾದ ವೇದಿಕಗಳಲ್ಲಿ ಪ್ರಪಂಚದ ರಾಷ್ಟ್ರಗಳ ನೇತೃತ್ವ ವಹಿಸಲು ಪ್ರಯತ್ನಿಸಿದೆ, ರಷ್ಯಾದಿಂದ ತೈಲ ಖರೀದಿಯ ಸ್ಥಗಿತ ಭಾರತದ ವೈಶ್ವವಿಕ ವ್ಯಕ್ತಿತ್ವದ ಹಾಗೂ ಸ್ವತಂತ್ರ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ಯುರೋಪಿನ ಇತರ ರಾಷ್ಟ್ರಗಳು ಭಾರತವನ್ನು ನಿಯಂತ್ರಣ ಮಾಡಲು ಹಾಗೂ ಭಾರತದಲ್ಲಿ ಆ ರಾಷ್ಟ್ರಗಳು ತಮ್ಮ ಹಿತಾಸಕ್ತಿಯನ್ನು ಹೇರಲು ಭಾರತದ ವಿದೇಶಾಂಗ ನೀತಿಗಳ ಮೇಲೆ ನಿಯಂತ್ರಣ ಮಾಡಲು ಪ್ರಯತ್ನಿಸಬಹುದು. ರಷ್ಯಾ ಹಾಗೂ ಚೀನಾ ಬ್ರಿಕ್ಸ್, ಎಸ್ ಸಿ ಓ ಮುಂತಾದ ವೇದಿಕೆಗಳಲ್ಲಿ ಪ್ರಮುಖ ರಾಷ್ಟ್ರಗಳಾಗಿವೆ . ರಷ್ಯಾ ದೊಂದಿಗಿನ ಸಂಬಂಧ ಹಳಸುವಿಕೆ ಈ ವೇದಿಕೆಗಳಲ್ಲಿ ಭಾರತದ ಪ್ರಭಾವಶಾಲಿ ಭೂಮಿಕೆಯ ಮೇಲೆ ಪರಿಣಾಮ ಬೀರುತ್ತದೆ.
ಭಾರತದ ರಕ್ಷಣಾ ಕ್ಷೇತ್ರದ ಮೇಲೆ ಮಾರಕ.
ರಷ್ಯಾ ಭಾರತದ ಪ್ರಮುಖ ರಕ್ಷಣಾ ಉತ್ಪನ್ನಗಳ ಪೂರೈಕೆದಾರ ರಾಷ್ಟ್ರವಾಗಿದೆ, ಒಂದು ವೇಳೆ ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದರೆ ಭಾರತದ ರಕ್ಷಣಾ ಸಾಮಗ್ರಿಗಳ ಪೂರೈಕೆ ಹಾಗೂ ತಂತ್ರಜ್ಞಾನದ ಸಹಕಾರ ಮುಂತಾದವುಗಳಿಗೆ ರಷ್ಯಾ ತನ್ನ ಪ್ರಾಥಮಿಕತೆಯನ್ನು ಕಡಿಮೆ ಮಾಡಬಹುದು, ಇದರಿಂದ ಭಾರತದ ರಕ್ಷಣಾ ಉಪಕರಣಗಳ ತಯಾರಿಕೆಯ ಮೇಲೆ ಪರಿಣಾಮ ಬೀರಬಹುದು.
ತೈಲ ಬೆಲೆ ಏರಿಕೆಯಿಂದ ಭಾರತದ ಜನಸಾಮಾನ್ಯರ ಮೇಲೆ ಹೊರೆ.
ರಷ್ಯಾದಿಂದ ತೈಲವನ್ನು ತೈಲ ಆಮದನ್ನು ಸ್ಥಗಿತಗೊಳಿಸಿ ಗೊಳಿಸಿದರೆ ಭಾರತದಲ್ಲಿ ತೈಲಬೆಲೆ ಏರಿಕೆ ಉಂಟಾಗುತ್ತದೆ, ಇದರಿಂದಾಗಿ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತದೆ ಇದರಿಂದಾಗಿ ಸರಕಾರಕ್ಕೆ ರಾಜಕೀಯ ಒತ್ತಡ ಉಂಟಾಗುತ್ತದೆ.




Leave a Reply