
ಭಾರತದ ಸ್ವದೇಶಿ ನ್ಯಾವಿಗೇಶನ್ ಸಿಸ್ಟಮ್ ನಾವಿಕ್ನಲ್ಲಿ ಸದ್ಯದಲ್ಲಿ ಒಟ್ಟು 9 ಸ್ಯಾಟಲೈಟ್ಗಳಲ್ಲಿ ಕೇವಲ 4 ಸ್ಯಾಟಲೈಟ್ ಗಳು ಕಾರ್ಯ ನಿರ್ವಹಿಸುತ್ತಿವೆ, ಇಸ್ರೋ ಇದನ್ನು ರಕ್ಷಣೆ ಹಾಗೂ ನಾಗರೀಕರ ಅವಶ್ಯಕತೆಗಳಿಗಾಗಿ ನಿರ್ಮಿಸಿತ್ತು, ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತಕ್ಕೆ ಇದರ ಅವಶ್ಯಕತೆಯ ಅರಿವಾಯಿತು ಏಕೆಂದರೆ ಆ ಸಮಯದಲ್ಲಿ ಅಮೆರಿಕ ಜಿಪಿಎಸ್ ನೀಡಲು ನಿರಾಕರಿಸಿತ್ತು, ಇದರ ಮುಖ್ಯ ಉದ್ದೇಶ ಅಮೆರಿಕಾದ ಜಿಪಿಎಸ್ ರಷ್ಯಾದ ಗ್ಲೋನಾಸ್ ಚೀನಾದ ಬೈಡು ಸಿಸ್ಟಮ್ಗಳ ಮೇಲೆ ನ ನಿರ್ಭರತೆಯನ್ನು ಕಡಿಮೆಗೊಳಿಸುವುದು ಆದರೆ ಸದ್ಯಕ್ಕೆ ನಾವಿಕ್ ವಿಫಲವಾಗುವ ಹಂತದಲ್ಲಿದೆ ಇದರಿಂದ ಭಾರತದ ಸುರಕ್ಷತೆ ಹಾಗೂ ಆತ್ಮ ನಿರ್ಭರತೆ ಮೇಲೆ ಪ್ರಶ್ನೆಗಳು ಉಂಟಾಗಿವೆ.
ನಾವಿಕ್ ಸಿಸ್ಟಂಗೆ ಏನಾಗಿದೆ?
ಐಡಿಆರ್ ಡಬ್ಲ್ಯೂ ವರದಿಯ ಪ್ರಕಾರ ನಾವಿಕ್ ನ ಬುನಾದಿ 1999ರ ಕಾರ್ಗಿಲ್ ಯುದ್ಧದ ನಂತರ ಯುದ್ಧದ ನಂತರ ಶುರುವಾಯಿತು. ಆ ಸಮಯದಲ್ಲಿ ಅಮೆರಿಕ ಭಾರತಕ್ಕೆ ಜಿಪಿಎಸ್ ಸರ್ವಿಸ್ ಅನ್ನು ನಿರಾಕರಿಸಿತ್ತು ಆದ್ದರಿಂದ ಭಾರತಕ್ಕೆ ತನ್ನ ಸ್ವಯಂ ನ್ಯಾವಿಗೇಶನ್ ಸಿಸ್ಟಮ್ ನ ಅರಿವಾಯಿತು, ಇದರ ನಂತರ 2013 ರಿಂದ 2018ರ ನಡುವೆ 9 ಸ್ಯಾಟಲೈಟ್ ಗಳನ್ನು ಲಾಂಚ್ ಮಾಡಲಾಯಿತು ಇದರಿಂದ ನಾವಿಕ್ನ ರಚನೆಯಾಯಿತು, ಈಗ ಇದರಲ್ಲಿ ಇದರ ಅನೇಕ ಸ್ಯಾಟಲೈಟ್ ಗಳು ತನ್ನ ಕಾರ್ಯವನ್ನು ನಿಲ್ಲಿಸಿವೆ ಐ IRNSS-1, BIF 1 ಮುಂತಾದ ಸ್ಯಾಟಲೈಟ್ ಗಳು ತನ್ನ ಜೀವನ ಕಾಲವನ್ನು ಪೂರ್ತಿಗೊಳಿಸಿದೆ, ಇಸ್ರೋ ಸ್ವಯಂ ತಾನಾಗಿಯೇ ನಾವಿಕ್ ಅನ್ನು ಸರಿಗೊಳಿಸಲು 5 ರಿಂದ 7 ಸ್ಯಾಟಿಲೈಟ್ ಗಳ ಅವಶ್ಯಕತೆ ಇದೆ ಎಂದು ಪ ಪ್ರಸ್ತುತಪಡಿಸಿದೆ ಆದರೆ ಸದ್ಯಕ್ಕೆ ಇದರಲ್ಲಿ ಕೇವಲ ನಾಲ್ಕು ಸ್ಯಾಟಿಲೈಟ್ ಗಳು ಮಾತ್ರ ಕೆಲಸ ಮಾಡುತ್ತಿವೆ.
ನಾವಿಕ್ ಈ ಸಮಸ್ಯೆಯನ್ನು ಹೇಗೆ ನಿಭಾಯಿಸಲಿದೆ?
ಸಂಸತ್ತಿನಲ್ಲಿ ಸರಕಾರದ ಸ್ಪಷ್ಟನೆಯ ಪ್ರಕಾರ 2026ರ ಅಂತ್ಯದ ಹೊತ್ತಿಗೆ NVS3, NVS4, NVS5 ಉಪಗ್ರಹಗಳನ್ನು ಲಾಂಚ್ ಮಾಡಲಿದೆ, ಈ ಉಪಗ್ರಹಗಳು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿವೆ ಹಾಗೂ ಉತ್ತಮ ಕಾರ್ಯ ಕ್ಷಮತೆಯನ್ನು ಹೊಂದಿರುವುದಾಗಿ ಸರಕಾರ ಸ್ಪಷ್ಟಪಡಿಸಿದೆ ಹಾಗೂ ಇವುಗಳ ಜೀವನಕ್ರಮ ಕಾರ್ಯ ದೀರ್ಘವಾಗಿರಲಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ ಆದರೆ ತಜ್ಞರ ಪ್ರಕಾರ ಇಸ್ರೋದ ತನ್ನ ಇತ್ತೀಚಿನ ವೇಗವನ್ನು ಗಮನಿಸಿದರೆ 26ರ ಅಂತ್ಯದ ಹೊತ್ತಿಗೆ ನಾವಿಕ್ನ ಎಲ್ಲಾ ಉಪಗ್ರಹಗಳ ಉಡಾವಣೆ ಕಷ್ಟ ಸಾಧ್ಯ ಎನ್ನಲಾಗುತ್ತಿದೆ, ಏಕೆಂದರೆ ಒಂದು ಸ್ಯಾಟಲೈಟ್ ನಿರ್ಮಾಣ ಹಾಗೂ ಅದರ ಪರೀಕ್ಷೆ ಹಾಗೂ ಅದರ ಉಡಾವಣೆ ಇವು ತುಂಬಾ ದೀರ್ಘಕಾಲದ ಪ್ರಕ್ರಿಯೆಯಾಗಿದೆ ಹಾಗಾಗಿ ಇಸ್ರೋಗೆ ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಲು ಈ ಸಮಸ್ಯೆಯನ್ನು ಪ್ರಾಥಮಿಕವಾಗಿ ಸ್ವೀಕರಿಸಬೇಕಾಗಿದೆ.
ಭಾರತಕ್ಕೆ ನಾವಿಕ್ ನ ಪ್ರಾಮುಖ್ಯತೆ ಏನು?
ಒಂದು ವೇಳೆ ನಿಮ್ಮ ಮನಸ್ಸಿನಲ್ಲಿ ಅಮೆರಿಕದ ಜಿಪಿಎಸ್ ರಷ್ಯಾದ ಗ್ಲೋನಸ್ ಹಾಗೂ ಚೈನಾದ ಬೈಡು ಮುಂತಾದ ಸಿಸ್ಟಮ್ ಇರುವಾಗ ಭಾರತದ ನಾವಿಕ್ ಸಿಸ್ಟಮ್ ನ ಅವಶ್ಯಕತೆ ಹೇಗಿದೆ ಏಕಿದೆ ಅನ್ನುವ ಪ್ರಶ್ನೆ ಉದ್ಭವಿಸಬಹುದು, ವಾಸ್ತವವಾಗಿ ನಾವಿಕ್ ಕೇವಲ ಒಂದು ನ್ಯಾವಿಗೇಶನ್ ಸಿಸ್ಟಮ್ ಅಲ್ಲ ಇದು ಭಾರತದ ಒಂದು ಶಕ್ತಿಯಾಗಿದೆ ಇದರ ಸಹಾಯದಿಂದ ಭಾರತದ ಸೇನೆಗೆ ಕ್ಷಿಪಣಿಗಳ ಡೈರೆಕ್ಷನ್ ಮಾಹಿತಿ ಹಾಗೂ ಸೈನಿಕರ ಚಲನವನ ವಲನಗಳ ಮೇಲೆ ಕಣ್ಣಿಡುವುದು ಮುಂತಾದವುಗಳು ಸುಲಭವಾಗಿದೆ, ಇದರೊಂದಿಗೆ ಪ್ರಾಕೃತಿಕ ವಿಕೋಪಗಳನ್ನು ಎದುರಿಸುವುದು ಹಾಗೂ ನಿಭಾಯಿಸುವುದು ಟೆಲಿಕಾಂ, ಟ್ರಾನ್ಸ್ಪೋರ್ಟ್ ಮುಂತಾದವುಗಳಲ್ಲಿ ಇದರ ಉಪಯೋಗ ಬಹಳವಿದೆ ಒಂದು ವೇಳೆ ಈ ಸಿಸ್ಟಮ್ ಫೇಲಾದರೆ ಭಾರತಕ್ಕೆ ವಿದೇಶಿ ತಂತ್ರಜ್ಞಾನದ ಮೇಲೆ ಮೇಲೆ ಆಧಾರವಾಗಬೇಕಾಗುತ್ತದೆ ಇದು ಯುದ್ಧ ಮತ್ತು ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಅಪಾಯವನ್ನು ತರುತ್ತದೆ.




Leave a Reply